Home ಟಾಪ್ ಸುದ್ದಿಗಳು ವಿವಾದಾತ್ಮಕ ಮೂರು ರಾಜಧಾನಿ ರಚನೆ ಮಸೂದೆ ಹಿಂಪಡೆದ ಆಂಧ್ರ ಸರ್ಕಾರ

ವಿವಾದಾತ್ಮಕ ಮೂರು ರಾಜಧಾನಿ ರಚನೆ ಮಸೂದೆ ಹಿಂಪಡೆದ ಆಂಧ್ರ ಸರ್ಕಾರ

ಕರ್ನೂಲ್: ಆಂಧ್ರಪ್ರದೇಶ ಸರ್ಕಾರ ವಿವಾದಾತ್ಮಕ ಮೂರು ರಾಜಧಾನಿ ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಿದೆ.

ಕಾರ್ಯಕಾರಿಣಿ ರಾಜಧಾನಿ ವಿಶಾಖಪಟ್ಟಣ, ಶಾಸಕಾಂಗ ರಾಜಧಾನಿ ಅಮರಾವತಿ ಮತ್ತು ನ್ಯಾಯಾಂಗ ರಾಜಧಾನಿ ಕರ್ನೂಲ್ ಎಂಬ ಕಾಯ್ದೆಗಳನ್ನು ಆಂಧ್ರ ಸರ್ಕಾರ ಹಿಂದಕ್ಕೆ ಪಡೆಯುವುದಾಗಿ ಘೋಷಿಸಿದೆ.

ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಶೀಘ್ರದಲ್ಲೇ ಆಂಧ್ರ ಅಸೆಂಬ್ಲಿಯಲ್ಲಿ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಅಡ್ವೋಕೇಟ್ ಜನರಲ್ ಎಸ್. ಸುಬ್ರಮಣ್ಯಂ ಇಂದು ಹೈಕೋರ್ಟ್ ಗೆ ತಿಳಿಸಿದರು.

ಈ ಮಸೂದೆಯನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಸ್ಥಾಪಿಸುವ ಗುರಿಯೊಂದಿಗೆ ಕಳೆದ ವರ್ಷ ಅಂಗೀಕರಿಸಿದ ವಿವಾದಾತ್ಮಕ ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳ ಅಂತರ್ಗತ ಅಭಿವೃದ್ಧಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರವನ್ನು ತುರ್ತು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾತ್ರವಲ್ಲ ಸಣ್ಣ ಮಟ್ಟದ ತಿದ್ದುಪಡಿಗಳೊಂದಿಗೆ ಮಸೂದೆಯನ್ನು ಮತ್ತೆ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಪ್ರಸಕ್ತ ಕಾನೂನಿನಿಂದ ರೈತರು ಮತ್ತು ಭೂಮಾಲೀಕರು ಅಸಮಾಧಾನಗೊಂಡಿದ್ದಾರೆ ಎಂಬುದಕ್ಕೆ ಎರಡು ವರ್ಷಗಳಿಂದ ನಡೆಯುತ್ತಿರುವ ಪ್ರತಿಭಟನೆಯೇ ಸಾಕ್ಷಿಯಾಗಿದೆ.

Join Whatsapp
Exit mobile version