Home ಟಾಪ್ ಸುದ್ದಿಗಳು ಡ್ರಗ್ಸ್ ಸೇವನೆ ಪ್ರಕರಣದಲ್ಲಿ ನಿರೂಪಕಿ ಅನುಶ್ರೀಗೆ ಸಂಕಷ್ಟ

ಡ್ರಗ್ಸ್ ಸೇವನೆ ಪ್ರಕರಣದಲ್ಲಿ ನಿರೂಪಕಿ ಅನುಶ್ರೀಗೆ ಸಂಕಷ್ಟ

ಮಂಗಳೂರು: ಡ್ರಗ್ಸ್ ಸೇವನೆ ಹಾಗೂ ಸಾಗಾಟ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ಖ್ಯಾತ ನಿರೂಪಕಿ ಕಮ್ ನಟಿ ಅನುಶ್ರೀಗೆ ಸಂಕಷ್ಟ ಎದುರಾಗಿದೆ. ಡ್ಯಾನ್ಸ್ ಮಾಡುವಾಗ ಸುಸ್ತಾಗಬಾರದೆನ್ನುವ ಕಾರಣಕ್ಕೆ ಕನ್ನಡದ ಖ್ಯಾತ ನಿರೂಪಕಿ, ನಟಿ ಅನುಶ್ರೀಯವರು ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಅಲ್ಲದೆ ನಮ್ಮ ಜೊತೆಯೇ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ಡ್ರಗ್ಸ್ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿ ಮಂಗಳೂರು ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ನೀಡಿರುವುದು ಆರೋಪಪಟ್ಟಿಯಲ್ಲಿ ದಾಖಲಾಗಿದೆ.


ಕನ್ನಡದ ಖಾಸಗಿ ವಾಹಿನಿ ನಡೆಸುತ್ತಿದ್ದ ರಿಯಾಲಿಟಿ ಶೋ ವೇಳೆ ಡ್ರಗ್ಸ್ ಅನುಶ್ರೀಯವರು ಡ್ರಗ್ ಸೇವನೆ ಮಾಡಿದ್ದರು. ಡ್ಯಾನ್ಸ್ ಪ್ರಾಕ್ಟೀಸ್ ಮಾಡುವ ವೇಳೆ ಸುಸ್ತು ಆಗಬಾರದೆನ್ನುವ ಕಾರಣಕ್ಕೆ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ಕಿಶೋರ್ ಶೆಟ್ಟಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.


ಡ್ರಗ್ಸ್ ಪ್ರಕರಣದ A1 ಆರೋಪಿ ತರುಣ್, A2 ಆರೋಪಿ ಕಿಶೋರ್ ಶೆಟ್ಟಿ ಮತ್ತು ಅನುಶ್ರೀಯವರು ಜೊತೆಯಲ್ಲಿಯೇ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂಬುದನ್ನು ಸ್ವತಃ ಕಿಶೋರ್ ಶೆಟ್ಟಿಯೇ ಹೇಳಿಕೊಂಡಿದ್ದಾನೆ. ನಾವೆಲ್ಲ ಜೊತೆಯಲ್ಲಿ ಪಾರ್ಟಿ ಮಾಡುತ್ತಿದ್ದೆವು. ಆ ವೇಳೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು ಎಂದು ಕಿಶೋರ್ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


ಕಿಶೋರ್ ಅಮನ್ ಶೆಟ್ಟಿ ಡ್ರಗ್ಸ್ ಸೇವನೆ ಜತೆಗೆ ಸಾಗಾಟ ಪ್ರಕರಣದ ಎರಡನೇ ಆರೋಪಿಯಾಗಿದ್ದಾರೆ. ‘ರಿಯಾಲಿಟಿ ಶೋನ ಕೊರಿಯೋಗ್ರಾಫರ್ ಆಗಿದ್ದ ತರುಣ್ ಮುಖಾಂತರ ನನಗೆ ಅನುಶ್ರೀ ಪರಿಚಯವಾಗಿತ್ತು. ತರುಣ್ ರೂಮ್ ನಲ್ಲಿ ತಡರಾತ್ರಿವರೆಗೂ ಅನುಶ್ರೀಗೆ ನೃತ್ಯ ತರಬೇತಿ ಮಾಡಿಸುತ್ತಿದ್ದೆವು. ನೃತ್ಯ ತರಬೇತಿಗೆ ಬರುವಾಗ ಅನುಶ್ರೀ ಎಕ್ಸ್ ಟಸಿ ಡ್ರಗ್ಸ್ ಖರೀದಿಸಿ ತರುತ್ತಿದ್ದರು. ನಮಗೆ ಎಕ್ಸ್ ಟಸಿ ಡ್ರಗ್ಸ್ ನೀಡಿ ಅನುಶ್ರೀ ಕೂಡ ಸೇವಿಸುತ್ತಿದ್ದರು. ಅನುಶ್ರೀಗೆ ಡ್ರಗ್ಸ್ ಪೆಡ್ಲರ್ಗಳ ಪರಿಚಯವಿದ್ದು ಡ್ರಗ್ಸ್ ಎಲ್ಲಿ ಸಿಗಲಿದೆ ಯಾರು ಪೂರೈಸುತ್ತಾರೆ ಎನ್ನುವುದು ಆಕೆಗೆ ಗೊತ್ತಿತ್ತು. ಡ್ರಗ್ಸ್ ಅಷ್ಟು ಸುಲಭವಾಗಿ ಅನುಶ್ರೀಗೆ ಹೇಗೆ ಸಿಗುತ್ತಿತ್ತೋ ಗೊತ್ತಿಲ್ಲ.’ ಎಂದು ಚಾರ್ಜ್ ಶೀಟ್ ನಲ್ಲಿ ಕಿಶೋರ್ ಶೆಟ್ಟಿ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.


ಪ್ರಕರಣದಲ್ಲಿ ಸಾಕ್ಷ್ಯಧಾರ ಕೊರತೆಯಿದ್ದರೆ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ಉಲ್ಲೇಖ ಆಗುತ್ತಿರಲಿಲ್ಲ. ಪೊಲೀಸರ ತನಿಖೆ ದಾಖಲೆಗಳು ಮತ್ತು ಕಿಶೋರ್ ಶೆಟ್ಟಿ ಅಮನ್ ಶೆಟ್ಟಿ ಹೇಳಿಕೆ ಮೇಲೆ ಮಂಗಳೂರು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಬೆಂಗಳೂರು ಸಿಸಿಬಿ ಪೊಲೀಸರು ದಾಖಲಿಸಿದ್ದ ಡ್ರಗ್ಸ್ ಕೇಸ್ ನಿಂದ ಮಂಗಳೂರು ಡ್ರಗ್ಸ್ ಜಾಲ ಬೆಳಕಿಗೆ ಬಂದಿತ್ತು. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸ್ಯಾಂಡಲ್ ವುಡ್ ಡ್ರಗ್ ಕೇಸ್ ಈ ಪ್ರಕರಣದಲ್ಲಿ ಸುಮಾರು 20ಕ್ಕೂ ಹೆಚ್ಚು ಜನರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.

Join Whatsapp
Exit mobile version