Home ಟಾಪ್ ಸುದ್ದಿಗಳು ಅನಂತಕುಮಾರ್ ಹೆಗಡೆ ಅಪ್ಪ ಬಂದರೂ ಸಂವಿಧಾನ ಬದಲಾಯಿಸಲು ಅಸಾಧ್ಯ: ಬಿಜೆಪಿ ಉಪಾಧ್ಯಕ್ಷ

ಅನಂತಕುಮಾರ್ ಹೆಗಡೆ ಅಪ್ಪ ಬಂದರೂ ಸಂವಿಧಾನ ಬದಲಾಯಿಸಲು ಅಸಾಧ್ಯ: ಬಿಜೆಪಿ ಉಪಾಧ್ಯಕ್ಷ

ಯಾದಗಿರಿ: ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮರ್ ಹಗಡೆ ಅಲ್ಲ, ಅವರ ಅಪ್ಪ ಬಂದರೂ ಸಂವಿಧಾನ ಬದಲಾವಣೆ ಮಾಡಲು ಆಗುವುದಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜುಗೌಡ ಹೇಳಿದ್ದಾರೆ.


ಯಾದಗಿರಿ ನಗರದಲ್ಲಿ ಮಾತನಾಡಿದ ರಾಜುಗೌಡ, ಅನಂತಕುಮಾರ್ ಹೆಗಡೆ ಅಲ್ಲ ಅವರಪ್ಪ ಬಂದರೂ ಸಂವಿಧಾನ ಬದಲಾವಣೆ ಮಾಡಲು ಆಗಲ್ಲ. ಇದೆ ತರಹ 2018 ರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ಬರೋದ್ದಕ್ಕೆ ಕಲ್ಲು ಹಾಕಿದ್ದರು. ಹಿಂದುತ್ವ, ಮೋದಿ ಗಾಳಿಯಲ್ಲಿ ಸಂಸದರಾಗುತ್ತಾರೆ. ಸಂಸದರಾದ ಮೇಲೆ ನಾಲ್ಕು ವರ್ಷ ಮಾಯ ಆಗಿಬಿಡುತ್ತದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ರೀತಿ ಹುಚ್ಚುಚ್ಚಾಗಿ ಹೇಳಿಕೆ ನೀಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.


ಅಂಬೇಡ್ಕರ್ ಅವರಿಗೆ ಮೋದಿ ಅವರಷ್ಟು ಗೌರವ ಕೊಡುವ ನಾಯಕ ಮತ್ತೊಬ್ಬ ಇಲ್ಲ. ಅಂಬೇಡ್ಕರ್ ಮಾರ್ಗದರ್ಶನದಲ್ಲಿ ಮೋದಿ ಅವರು ಹೊರಟಿದ್ದಾರೆ. ನಾಲ್ಕು ವರ್ಷ ಕಾಣೆ ಆಗಿದ್ದಕ್ಕೆ ಈ ರೀತಿ ಹೇಳಿಕೆ ನೀಡಿ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದ ನಾನು ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿ ಹೇಳುತ್ತಿದ್ದೇನೆ. ಎಲ್ಲೋ ನಾಲ್ಕು ಜನರ ಮಧ್ಯೆ ಮಾತಾಡಿ ವೈರಲ್ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

Join Whatsapp
Exit mobile version