Home ಟಾಪ್ ಸುದ್ದಿಗಳು ಅನಂತಕುಮಾರ್ ಹೇಳಿಕೆಯಿಂದ ಜಿಲ್ಲೆಯ ಜನ ತಲೆ ತಗ್ಗಿಸುವಂತಾಗಿದೆ: ದೊಡ್ಡೂರು

ಅನಂತಕುಮಾರ್ ಹೇಳಿಕೆಯಿಂದ ಜಿಲ್ಲೆಯ ಜನ ತಲೆ ತಗ್ಗಿಸುವಂತಾಗಿದೆ: ದೊಡ್ಡೂರು

ಶಿರಸಿ: ವೇದ, ಸಂಸ್ಕೃತಿ‌ ಬಗ್ಗೆ ಮಾತನಾಡುವ ಹಿರಿಯ ರಾಜಕಾರಣಿ ಸಂಸದ ಅನಂತಕುಮಾರ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ಅವರ‌ ಬಗ್ಗೆ ಏಕ ವಚನ, ಅಸಂವಿಧಾನಿಕವಾಗಿ ಮಾತನಾಡಿದ್ದು ಜಿಲ್ಲೆಯ ಜನ ತಲೆ ತಗ್ಗಿಸುವಂತೆ ಆಗಿದೆ. ಇಂಥ ಜನಪ್ರತಿನಿಧಿಗಳು ಯಾವುದೇ ಪಕ್ಷದಲ್ಲಿ ಇದ್ದರೂ ಆ ಪಕ್ಷಕ್ಕೆ ಮುಜುಗರ ಎಂದು ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ಡೂರು ಹೇಳಿದ್ದಾರೆ.

ಸುಪ್ರಿಯಾ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ಅನಂತಕುಮಾರ ಹೆಗಡೆ ನಾಲಾಯಕು ಮನುಷ್ಯ. ಅವರು ರಾಷ್ಟ್ರ ಮಟ್ಟಕ್ಕೆ ಹೋದ ಬಳಿಕ ಜಿಲ್ಲೆಗೆ ಮಸಿ ಬಳಿಯುವಂತಾಗಿದೆ. ಅಗೌರವ ತೋರಿಸುವಂಥದ್ದು ಸಂಸದರಿಗೆ ಹೊಸತಲ್ಲ. ಜಿಲ್ಲೆಗೆ ಹಿಂದೆ ಪ್ರಧಾನಿಗಳು ಬಂದಾಗಲೂ‌ ಸಮಯ‌ ಕೊಡಲಿಲ್ಲ.‌ ಮೊನ್ನೆ‌ ಮೊನ್ನೆ ಗೂಡಿನಿಂದ ಹೊರ‌ ಬಂದು ಗೌರವಯುತ ಸಿಎಂ ಬಗ್ಗೆ ಏಕ ವಚನ‌ ಪದ‌ ಪ್ರಯೋಗ ಮಾಡಿದ್ದಾರೆ. ನಾಲ್ಕುವರೆ ವರ್ಷ ಜನರಿಗೆ ಧ್ವನಿಯಾಗದೆ ಜನರ ನಕಾರಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನು ಆತ ಬಿಡಬೇಕು. ಈ‌ ಜಿಲ್ಲೆಯ ಜನ ಸಾಕಷ್ಟು ಅವಧಿಯ ತನಕ ಅನಂತರ ಹರಿಕತೆ ಕೇಳಿಯೂ ಆಯಿತು ಎಂದು ಹೇಳಿದ್ದಾರೆ.

ಜನ ಪ್ರತಿನಿಧಿಗಳಾದವರು ಕೋಮು ಸೌಹಾರ್ದತೆ ಹೊಂದಿರಬೇಕು. ಆದರೆ, ಅನಂತನ ನಡೆಯಿಂದ ಆತಂಕ ಉಂಟಾಗಿದೆ. ಅನಂತರು ಇತಿಹಾಸಕಾರರು, ಸಾಹಿತ್ಯಕ್ಕೆ ಮಹತ್ವ ಕೊಟ್ಟರೆ ಹೆಚ್ಚಿನ ಹೆಸರು ಅವರಿಗೆ ಬರುತ್ತಿತ್ತು ಎಂದ ದೀಪಕ್, ಸಂಸದರು ಅಬ್ಬರಿಸುವುದು ಕೋಮು ಸೌಹಾರ್ದ ಕೆಡಿಸಲು ಮಾತ್ರ. ಅಭಿವೃದ್ದಿ ಬಗ್ಗೆ ಅವರು ಮಾತನಾಡುತ್ತಿಲ್ಲ. ಅಂಕೋಲಾ‌ ಹುಬ್ಬಳ್ಳಿ ರೈಲ್ವೆ, ರಸ್ತೆ ಅಭಿವೃದ್ಧಿ ಆಗಿಲ್ಲ. ವಿಮಾನ ನಿಲ್ದಾನ ಬಂದಿಲ್ಲ ಎಂದರು.

Join Whatsapp
Exit mobile version