ಅನಂತ್ ಅಂಬಾನಿ–ರಾಧಿಕಾ ಮದುವೆಗೆ ಬಾಂಬ್ ಬೆದರಿಕೆ: ಆರೋಪಿ ಬಂಧನ

Prasthutha|

ಮುಂಬೈ: ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ರಾಧಿಕಾ ಮರ್ಚಂಟ್ ವಿವಾಹದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

- Advertisement -


ಬಾಂಬ್ ಬೆದರಿಕೆಯೊಡ್ಡಿದ ಆರೋಪಿಯನ್ನು ವಡೋದರ ನಿವಾಸಿ ವಿರಾಲ್ ಶಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಜರಾತ್‌ನಲ್ಲಿರುವ ಅವರ ನಿವಾಸದಿಂದ ಮುಂಬೈ ಪೊಲೀಸರ ಕ್ರೈಂ ಬ್ರಾಂಚ್ ಅವರನ್ನು ಇಂದು ಬೆಳಗ್ಗೆ ಬಂಧಿಸಿದ್ದಾರೆ. ಎಕ್ಸ್ ನಲ್ಲಿ ffsfir ಹೆಸರಿನ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


‘ಅಂಬಾನಿ ಕುಟುಂಬದ ಮದುವೆಯಲ್ಲಿ ಬಾಂಬ್ ಸ್ಫೋಟಗೊಂಡರೆ ನಾಳೆ ಅರ್ಧ ಜಗತ್ತು ತಲೆಕೆಳಗಾಗಲಿದೆ ಎನ್ನುವ ಯೋಚನೆ ನನ್ನ ತಲೆಯಲ್ಲಿ ಬರುತ್ತಿದೆ’ ಎಂದು ಪೋಸ್ಟ್ ಹಂಚಿಕೊಂಡಿದ್ದನು.



Join Whatsapp
Exit mobile version