ರಾಂಚಿ: ಹಜಾರಿಬಾಗ್ ನಲ್ಲಿ ಮಹೀಂದ್ರಾ ಲೋನ್ ರಿಕವರಿ ಏಜೆಂಟ್ ಓರ್ವ ಟ್ರ್ಯಾಕ್ಟರ್ ಹರಿಸಿ ಗರ್ಭಿಣಿಯೊಬ್ಬರ ಸಾವಿಗೆ ಕಾರಣವಾಗಿದ್ದಾನೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.
ಹಜಾರಿಬಾಗ್ ಘಟನೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ ಮತ್ತು ವಿಚಲಿತರಾಗಿದ್ದೇವೆ ಎಂದಿದ್ದಾರೆ. ಮಾನವ ದುರಂತವೊಂದು ಸಂಭವಿಸಿದೆ. ನಾವು ಈ ಘಟನೆಯನ್ನು ಎಲ್ಲಾ ಅಂಶಗಳಿಂದ ತನಿಖೆ ಮಾಡುತ್ತೇವೆ. ತನಿಖೆಯ ಸಮಯದಲ್ಲಿ ನಾವು ಅಧಿಕಾರಿಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತೇವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಈ ದುಃಖದ ಕ್ಷಣದಲ್ಲಿ ನಾವು ಸಂತ್ರಸ್ತ ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ಮಹೀಂದ್ರಾ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನೀಶ್ ಶಾ ಪ್ರಕಟಣೆ ಹೊರಡಿಸಿದ್ದಾರೆ.
ಇತ್ತೀಚಿಗೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ , ಮಹೀಂದ್ರಾ ಫೈನಾನ್ಸ್ನಿಂದ 1.3 ಲಕ್ಷ ರೂಪಾಯಿ ಲೋನ್ ಬಾಕಿ ಉಳಿಸಿಕೊಂಡಿದ್ದಕ್ಕೆ , ಲೋನ್ ರಿಕವರಿ ಏಜೆಂಟ್ ಕುಟುಂಬದ ಟ್ರ್ಯಾಕ್ಟರ್ ಅನ್ನು ಮುಟ್ಟುಗೋಲು ಹಾಕೊಂಡಿದ್ದರ ವಿರುದ್ಧ ರೈತನ 27 ವರ್ಷದ ಗರ್ಭಿಣಿ ಮಗಳು ಪ್ರತಿಭಟಿಸುವಾಗ ಟ್ರ್ಯಾಕ್ಟರ್ ಹರಿದು ದುರಂತವಾಗಿ ಸಾವಿಗೀಡಾಗಿದ್ದಳು.
ಉದ್ದೇಶಪೂರ್ವಕವಾಗಿಯೇ ಟ್ರ್ಯಾಕ್ಟರ್ ಹರಿಸಿರುವ ಆರೋಪ ಕೇಳಿಬಂದಿದ್ದು, ಈ ಘಟನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಬಗ್ಗೆ ಕಂಪನಿ ತ ಹೇಳಿಕೆ ಬಿಡುಗಡೆ ಮಾಡಿದೆ.