Home ರಾಜ್ಯ ಬೆಂಗಳೂರು: ಪರ ಭಾಷಿಕರಿಗೆ ಕನ್ನಡ ಕಲಿಸಲು ಆಟೋ ಚಾಲಕನ ವಿನೂತನ ಪ್ರಯತ್ನ

ಬೆಂಗಳೂರು: ಪರ ಭಾಷಿಕರಿಗೆ ಕನ್ನಡ ಕಲಿಸಲು ಆಟೋ ಚಾಲಕನ ವಿನೂತನ ಪ್ರಯತ್ನ

ಬೆಂಗಳೂರು: ಪರ ಭಾಷಿಗರಿಗೆ ಸ್ವಲ್ಪವಾದರೂ ಕನ್ನಡ ಭಾಷೆಯಲ್ಲಿ ಕಲಿಸಲು ಆಟೋ ಚಾಲಕರೊಬ್ಬರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಕುರಿತ ಪೋಸ್ಟ್ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಬೆಂಗಳೂರಿನ ಆಟೋ ಚಾಲಕರೊಬ್ಬರು ಈ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ʼಲರ್ನ್ ಕನ್ನಡ ವಿತ್ ಆಟೋ ಕನ್ನಡಿಗʼ ಎಂಬ ವಿಶಿಷ್ಟ ಕಾನ್ಸೆಪ್ಟ್ ಮೂಲಕ ಪರ ಭಾಷಿಗರಿಗೆ ಕೆಲವೊಂದು ಬೇಸಿಕ್ ಕನ್ನಡ ಪದಗಳನ್ನು ಕಲಿಸುವಂತಹ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಆಟೋದಲ್ಲಿ ಮಾತನಾಡುವಂತಹ ಕೆಲವೊಂದು ಬೇಸಿಕ್ ಪದಗಳನ್ನು ಇಂಗ್ಲೀಷ್ ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ಪ್ರಿಂಟ್ ಮಾಡಿಸಿ ತಮ್ಮ ಆಟೋದಲ್ಲಿ ಅಂಟಿಸಿದ್ದಾರೆ. ಈ ಮೂಲಕ ಅನ್ಯ ಭಾಷಿಗರು ಆಟೋ ಚಾಲಕರ ಜೊತೆ ಸುಲಭವಾಗಿ ಕನ್ನಡದಲ್ಲಿಯೇ ವ್ಯವಹರಿಸಬಹುದಾಗಿದೆ.


ಇದರಲ್ಲಿ ಒಬ್ಬ ಪ್ರಯಾಣಿಕರು ಆಟೋ ಪ್ರಯಾಣದ ವೇಳೆ ಏನೆಲ್ಲ ಮಾತನಾಡುತ್ತಾರೆ ಎಂಬುದನ್ನು ಪಟ್ಟಿ ಮಾಡಿ, ಅದನ್ನು ಅವರಿಗೆ ಅರ್ಥವಾಗುವಂತೆ ಕನ್ನಡದ ವಾಕ್ಯಗಳನ್ನು ಇಂಗ್ಲೀಷ್ನಲ್ಲೇ ಸುಲಭವಾಗಿ ಅರ್ಥವಾಗುವಂತೆ ಮುದ್ರಿಸಿದ್ದಾರೆ. ಉದಾಹರಣೆಗೆ ಪ್ರಯಾಣಿಕರು ಆಟೋ ಹತ್ತುವಾಗ, ಚಾಲಕರನ್ನು ಮಾತನಾಡಿಸುವುದು, ಚಿಲ್ಲರೆ ಕೊಡುವುದು, ಹಣ ಪಾವತಿ, ಯಾವ ಸ್ಥಳ ತಲುಪಬೇಕು? ಎಂಬುದನ್ನು ಕನ್ನಡದಲ್ಲಿ ಹೇಗೆ ಕೇಳಬಹುದು ಎಂದು ಅದನ್ನು ಇಂಗ್ಲೀಷ್ಗೆ ಟೈಪಿಂಗ್ ಭಾಷೆಯಂತೆ ಸಿದ್ಧಪಡಿಸಿದ್ದಾರೆ.


ಈಗ ನಾವು ಹೇಗಿದ್ದೀಯ ಅನ್ನೋದನ್ನ hegiddiya ಎಂದು ಇಂಗ್ಲೀಷ್ನಲ್ಲಿ ಚಾಟ್ ಮಾಡುವಂತೆಯೇ ಸುಲಭವಾಗಿ ಪಟ್ಟಿ ಮಾಡಿ ಅಂಟಿಸಿದ್ದಾರೆ. ಉದಾಹರಣೆಗೆ ನಮಸ್ಕಾರ ಸರ್, ನಾನು ಕನ್ನಡ ಕಲೀತಾ ಇದ್ದೀನಿ, ಸ್ವಲ್ಪ ಬೇಗ ಹೋಗಿ, ಸ್ವಲ್ಪ ನಿಧಾನವಾಗಿ ಹೋಗಿ, ಸ್ವಲ್ಪ ಮುಂದೆ ಹೋಗಿ ಬಲಕ್ಕೆ ತಗೊಳ್ಳಿ…ಇಲ್ಲೇ ನಿಲ್ಸಿ, ಎಷ್ಟು ಆಯ್ತು?, ಯುಪಿಐ ಇದ್ಯಾ ಇಲ್ಲಾ ಕ್ಯಾಶಾ? ನಿಮ್ ಹತ್ರ ನೂರು ರೂಪಾಯಿಗೆ ಚಿಲ್ಲರೆ ಇದ್ಯಾ? ಎಂಬುದನ್ನು ಇಂಗ್ಲೀಷ್ನಲ್ಲೇ ಟೈಪ್ ಮಾಡಿ, ಇಂಗ್ಲಿಷ್ ವಾಕ್ಯಗಳನ್ನು ಕನ್ನಡದಲ್ಲಿ ಉಚ್ಚರಿಸುವುದು ಹೇಗೆ? ಎನ್ನುವುದನ್ನು ಹೇಳಿಕೊಡಲು ಮುಂದಾಗಿದ್ದಾರೆ.


ಇದಕ್ಕಾಗಿ ಆಟೋ ಕನ್ನಡಿಗ ಹೆಸರಿನಲ್ಲೇ ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ಯುಟ್ಯೂಬ್ ಪೇಜ್ಗಳನ್ನು ಕೂಡ ಕ್ರಿಯೇಟ್ ಮಾಡಿದ್ದು, ಇದರಲ್ಲಿಯೂ ಕನ್ನಡ ಬಾರದವರು ಸುಲಭವಾಗಿ ಭಾಷೆ ಕಲಿಯಬಹುದು ಎನ್ನಲಾಗಿದೆ.

Join Whatsapp
Exit mobile version