Home ಟಾಪ್ ಸುದ್ದಿಗಳು ಅಮೂಲ್, ಮದರ್ ಡೈರಿ ಹಾಲಿನ ದರ ಲೀಟರ್ ಗೆ 2 ರೂ. ಹೆಚ್ಚಳ

ಅಮೂಲ್, ಮದರ್ ಡೈರಿ ಹಾಲಿನ ದರ ಲೀಟರ್ ಗೆ 2 ರೂ. ಹೆಚ್ಚಳ

ದೆಹಲಿ: ಅಮುಲ್ ಹಾಗೂ ಮದರ್ ಡೈರಿ ಹಾಲಿನ ದರ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳವಾಗಿದೆ. ಈ ಮೂಲಕ ಒಂದೇ ವರ್ಷದಲ್ಲಿ ಎರಡು ಸಲ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.


ಅಮುಲ್ ಈ ವರ್ಷದ ಫೆಬ್ರವರಿಯಲ್ಲಿ ಬೆಲೆಗಳನ್ನು ಹೆಚ್ಚಿಸಿತ್ತು. ಅಮುಲ್ ಹಾಗೂ ಮದರ್ ಡೈರಿ ಪ್ರತಿ ಲೀಟರ್ ಹಾಲಿನಲ್ಲಿ ಎರಡು ರೂ. ಹೆಚ್ಚಿಸಿದ್ದು, ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ.


ಅಮುಲ್ ಗೋಲ್ಡ್ ಬೆಲೆ 500 ಎಂಎಲ್ ಗೆ 31 ರೂ., ಅಮುಲ್ ತಾಜಾ 500 ಎಂಎಲ್ ಗೆ 25 ರೂ., ಅಮುಲ್ ಶಕ್ತಿ 500 ಎಂಎಲ್ ಗೆ 28 ರೂ. ಆಗಲಿದೆ. ಎಂಆರ್ ಪಿಯಲ್ಲಿ ಶೇ. 4ರಷ್ಟು ಜಾಸ್ತಿಯಾಗಿದೆ. ಮದರ್ ಡೈರಿ ಕೂಡ ಹಾಲಿನ ಉತ್ಪನ್ನಗಳಲ್ಲಿ ಏರಿಕೆ ಮಾಡಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಸದ್ಯ ಟೋನ್ಡ್ ಹಾಲು ಪ್ರತಿ ಲೀಟರ್ ಗೆ 51 ರೂ. ಇದ್ದು, ಡಬಲ್ ಟೋನ್ಡ್ ಹಾಲಿನ ದರ ಲೀಟರ್ ಗೆ 45 ರೂ. ಆಗಲಿದೆ.

Join Whatsapp
Exit mobile version