1.5 ಕೋಟಿ ರೂ. ವೇತನ ಪಡೆಯುತ್ತಾರೆ ಎನ್ನಲಾಗಿದ್ದ ಅಮಿತಾಭ್ ಬಚ್ಚನ್ ಬಾಡಿಗಾರ್ಡ್ ವರ್ಗಾವಣೆ

Prasthutha|

ಮುಂಬೈ: ಅಮಿತಾಭ್ ಬಚ್ಚನ್ ಅವರ ಪೊಲೀಸ್ ಬಾಡಿಗಾರ್ಡ್ ಜಿತೇಂದ್ರ ಶಿಂಧೆ ಅವರು ವರ್ಷಕ್ಕೆ 1.5 ಕೋಟಿ ರೂ.ಗಳನ್ನು ಗಳಿಸುತ್ತಿದ್ದಾರೆ ಎನ್ನುವ ವರದಿ ಹೊರ ಬೀಳುತ್ತಿದ್ದಂತೆ ಅವರನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ.

2015ರಿಂದಲೂ ಅಮಿತಾಬ್ ಬಚ್ಚನ್ ಅವರಿಗೆ ಬಾಡಿಗಾರ್ಡ್ ಆಗಿ ಶಿಂಧೆ ಕಾರ್ಯನಿರ್ವಹಿಸುತ್ತಿದ್ದರು. ಻಻ಅವರ ದುಬಾರಿ ಗಳಿಕೆಯ ವರದಿ  ಹೊರಹೊಮ್ಮಿದ ಕೂಡಲೇ ಮುಂಬೈ ಪೊಲೀಸರು ಇಷ್ಟು ಹಣವನ್ನು ಶಿಂಧೆ ಅವರು ಅಮಿತಾಭ್​ ರಿಂದ ಗಳಿಸಿದ್ದಾರೆಯ ಅಥವಾ ಬೇರೆ ಮೂಲಗಳಿಂದ ಗಳಿಸಿದ್ದಾರೆಯೇ ಎಂದು ತನಿಖೆ ನಡೆಸಲು ಆದೇಶಿಸಿದ್ದಾರೆ. 

- Advertisement -