ವಾಷಿಂಗ್ಟನ್: ಗಾಝಾದಲ್ಲಿ ಸಾವಿರಾರು ಮಂದಿಯ ಹತ್ಯಾಕಾಂಡ ನಡೆಸುತ್ತಿರುವ ಇಸ್ರೇಲ್‌ಗೆ ಅಮೆರಿಕ ಮತ್ತೆ 26 ಬಿಲಿಯನ್ ಮೌಲ್ಯದ ನೆರವು ಪ್ಯಾಕೇಜ್‌ನ್ನು ಅನುಮೋದಿಸಿದೆ ಎಂದು ವರದಿಯಾಗಿದೆ.
ಗಾಝಾದ ಮೇಲೆ ದಾಳಿ ನಡೆಸಲು ಅಮೆರಿಕ ಈ ಮೊದಲು ಇಸ್ರೇಲ್‌ಗೆ ಯುದ್ಧ ವಿಮಾನಗಳು ಮತ್ತು ಶಸ್ತ್ರಾಸ್ತ್ರವನ್ನು ಕಳುಹಿಸಿಕೊಟ್ಟಿತ್ತು. ಇದಕ್ಕೆ ಅಂತರಾಷ್ಟ್ರೀಯ ಸಮುದಾಯ ಸೇರಿದಂತೆ ಅಮೆರಿಕದ ಪ್ರಜೆಗಳೇ ಬೈಡನ್‌ಗೆ ವಿರೋಧವನ್ನು ವ್ಯಕ್ತಪಡಿಸಿದ್ದರು.
ಗಾಝಾದಲ್ಲಿ ಹತ್ಯಾಕಾಂಡವನ್ನು ನಡೆಸುವ ಇಸ್ರೇಲ್‌ಗೆ ಬೆಂಬಲಿಸದಂತೆ ಅಮೆರಿಕದಲ್ಲಿಯೇ ಪ್ರತಿಭಟನೆ ನಡೆದಿದ್ದರೂ ಮತ್ತೆ ಇಸ್ರೇಲ್‌ಗೆ ಅಮೆರಿಕ ನೆರವನ್ನು ಘೋಷಿಸಿದೆ.