ವಾಷಿಂಗ್ಟನ್ : ಅಮೆರಿಕದ ವಾಷಿಂಗ್ಟನ್ ಮತ್ತು ಒರೆಗಾನ್ ರಾಜ್ಯದಲ್ಲಿ ಕಾಡ್ಗಿಚ್ಚು ಸುಮಾರು 1 ದಶಲಕ್ಷ ಎಕರೆ ಪ್ರದೇಶವನ್ನು ಸುಟ್ಟು ಹಾಕಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಸುಂಟರಗಾಳಿಯಿಂದಾಗಿ ತೀವ್ರಗತಿಯಲ್ಲಿ ಕಾಡ್ಗಿಚ್ಚು ಹರಡುತ್ತಿರುವುದರಿಂದ ಈ ಮಟ್ಟದಲ್ಲಿ ಅನಾಹುತ ಸಂಭವಿಸಿದೆ.
ಜುಲೈ 17ರಂದು ಸಿಡಿಲು ಬಡಿದು ಕಾಡ್ಗಿಚ್ಚು ಉಂಟಾಗಿತ್ತು. ಅದು 97 ಕಿ.ಮೀ ವೇಗದ ಗಾಳಿಯಿಂದ ಕ್ಷಿಪ್ರಗತಿಯಲ್ಲಿ ಹರಡಿದೆ.
ಒರೆಗಾನ್ ರಾಜ್ಯದ ಹಂಟಿಂಗ್ಟಡನ್ ನಗರದ ಸುಮಾರು 1,553 ಚದರ ಕಿ.ಮೀ ಪ್ರದೇಶಕ್ಕೆ (ರ್ಹೋಡ್ಸ್ ದ್ವೀಪದ ಅರ್ಧಾಂಶದಷ್ಟು ) ಆವರಿಸಿದ್ದು ನೂರಾರು ಜಾನುವಾರುಗಳು ಸಾವನ್ನಪ್ಪಿವೆ. ಇದುವರೆಗೆ 20%ದಷ್ಟು ಕಾಡ್ಗಿಚ್ಚು ಮಾತ್ರ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಕಿಡಿಗೇಡಿಯೊಬ್ಬನ ಕೃತ್ಯದಿಂದ ಕಾಡ್ಗಿಚ್ಚು ಪ್ರಾರಂಭವಾಗಿತ್ತು. ಅದು ಕೂಡ ತೀವ್ರವಾಗಿ ಹರಡುತ್ತಿದ್ದು 4000ಕ್ಕೂ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದ ಕಾರನ್ನು ಓರ್ವ ವ್ಯಕ್ತಿ ಒಣಹುಲ್ಲಿನ ರಾಶಿಯ ಮೇಲೆ ದೂಡಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಮಾಹಿತಿಯಂತೆ ಬೆಂಕಿ 1,64,200 ಎಕರೆ ಪ್ರದೇಶವನ್ನೂ ಮೀರಿ ವಿಸ್ತರಿಸಿದೆ ಎಂದು ಕ್ಯಾಲಿಫೋರ್ನಿಯಾದ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ಹೇಳಿದೆ.