Home ಟಾಪ್ ಸುದ್ದಿಗಳು ಅಮೆರಿಕ: ನಗರದಲ್ಲಿ 2 ಕತ್ತರಿಸಿದ ತಲೆಗಳು ಪತ್ತೆ

ಅಮೆರಿಕ: ನಗರದಲ್ಲಿ 2 ಕತ್ತರಿಸಿದ ತಲೆಗಳು ಪತ್ತೆ

ವಾಷಿಂಗ್ಟನ್: ಅಮೆರಿಕದ ನ್ಯೂಯಾರ್ಕ್ ರಾಜ್ಯದ ನಸಾವು ಕೌಂಟಿಯ ಹೆಂಪ್ಸ್ಟೆಡ್ ಪ್ರದೇಶದ ಐಲ್ಯಾಂಡ್ ಪಾರ್ಕ್ ನಗರದಲ್ಲಿ ಕತ್ತರಿಸಿದ 2 ತಲೆಗಳು ಹಾಗೂ ಮಾನವನ ದೇಹದ ಇತರ ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಒಂದು ತಲೆ, ಬಲಗೈ ಮತ್ತು ಕಾಲುಗಳು ಮಹಿಳೆಯದ್ದು ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಗೆ ತೆರಳುತ್ತಿದ್ದ ಹುಡುಗಿ ರಸ್ತೆಯ ಪಕ್ಕದಲ್ಲಿ ಕತ್ತರಿಸಿ ಬಿಸಾಡಲಾಗಿದ್ದ ಕೈ ಒಂದನ್ನು ಕಂಡು ಆತಂಕಕ್ಕೆ ಈಡಾಗಿದ್ದು, ತನ್ನ ತಂದೆಗೆ ವಿಷಯ ತಿಳಿಸಿದ್ದಾಳೆ. ಅವರು ಸ್ಥಳಕ್ಕೆ ಬಂದು ವಿಷಯ ದೃಢೀಕರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಹುಡುಕಾಡಿದಾಗ 2 ಕತ್ತರಿಸಿದ ತಲೆಗಳು ಹಾಗೂ ಮಾನವ ದೇಹದ ಹಲವು ಅಂಗಾಂಗಗಳು ಪತ್ತೆಯಾಗಿವೆ. ಕುಖ್ಯಾತ ಎಂಎಸ್-13 ಕ್ರಿಮಿನಲ್ ಗ್ಯಾಂಗಿನ ಕೃತ್ಯ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು ತನಿಖೆ ಮುಂದುವರಿಸಿದ್ದಾರೆ.

Join Whatsapp
Exit mobile version