Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ಕಾರಿಗೆ ಡಿಕ್ಕಿಯಾದ ಅಂಬುಲೆನ್ಸ್: ಕ್ಯಾನ್ಸರ್ ರೋಗಿ ಮೃತ್ಯು

ಬೆಂಗಳೂರಿನಲ್ಲಿ ಕಾರಿಗೆ ಡಿಕ್ಕಿಯಾದ ಅಂಬುಲೆನ್ಸ್: ಕ್ಯಾನ್ಸರ್ ರೋಗಿ ಮೃತ್ಯು

ಬೆಂಗಳೂರು: ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಅಂಬುಲೆನ್ಸ್ ಲಾರಿಗೆ ಡಿಕ್ಕಿಯಾದ ಪರಿಣಾಮ ಅದರಲ್ಲಿದ್ದ ರೋಗಿ ಸಾವನ್ನಪ್ಪಿದ ದುರಂತ  ಘಟನೆ  ನೆಲಮಂಗಲದ ಬೊಮ್ಮನಹಳ್ಳಿಯ ಬಳಿ ನಡೆದಿದೆ.  ಚಿತ್ರದುರ್ಗ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುತ್ತಿರುವಾಗ ಈ ದುರಂತ ನಡೆದಿದೆ. ವೇಗವಾಗಿ ಬರುತ್ತಿದ್ದ ಅಂಬುಲೆನ್ಸ್ ಲಾರಿಗೆ ಬಲವಾಗಿ ಗುದ್ದಿದ್ದು, ಅದರಲ್ಲಿದ್ದ ರೋಗಿ ವಿಜಯ್ ಕುಮಾರ್ ಸಾವನ್ನಪ್ಪಿದ್ದಾರೆ.  ಘಟನೆಯಲ್ಲಿ ಅಂಬುಲೆನ್ಸ್ ಚಾಲಕ ಸೇರಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವಿಜಯ್ ಕುಮಾರ್ ರವರನ್ನು ಮಲಗಿಸಿಕೊಂಡ ಅಂಬುಲೆನ್ಸ್ ತುಮಕೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿತ್ತು. ವೇಗವಾಗಿ ಬರುತ್ತಿರುವಾಗ ಕಂಟೈನರ್ ಲಾರಿಗೆ ಅಂಬುಲೆನ್ಸ್ ಡಿಕ್ಕಿಯಾಗಿದೆ. ಪರಿಣಾಮ ವಿಜಯ್ ಕುಮಾರ್ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.

Join Whatsapp
Exit mobile version