ಆಂಬುಲೆನ್ಸ್- ಆಟೋ ಮುಖಾಮುಖಿ ಡಿಕ್ಕಿ; ನಾಲ್ವರಿಗೆ ಗಾಯ

Prasthutha|

ಮೂಡಿಗೆರೆ: ಮಂಗಳೂರಿನಿಂದ ಮೂಡಿಗೆರೆಗೆ ರೋಗಿಯನ್ನು ಬಿಟ್ಟು ಹೋಗುತ್ತಿದ್ದ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲಿದ್ದ ನಾಲ್ವರು ಗಾಯಗೊಂಡ ಘಟನೆ ಚಾರ್ಮಾಡಿ ಘಾಟ್ ನ ಒಂದನೇ ತಿರುವಿನಲ್ಲಿ ನಡೆದಿದೆ.

- Advertisement -

ಬಣಕಲ್ ಪಟ್ಟಣದ ಆಟೋ ವಾಗಿದ್ದು ಆಟೋದಲಿದ್ದ ಪ್ರಯಾಣಿಕರು ಧರ್ಮಸ್ಥಳ ಕ್ಕೆ ಹೋಗಿ ದರ್ಶನ ಮುಗಿಸಿ ಬರುವಾಗ ಅಪಘಾತ ನಡೆದಿದೆ. ವಾಹನಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡು ವಾಹನಗಳು ಜಖಂ ಗೊಂಡಿದೆ. ಗಾಯಾಳುಗಳನ್ನು ಕಕ್ಕಿಂಜೆ ಆಸ್ಪತ್ರೆಗೆ ರವಾನಿಸಲಾಗಿದೆ.

Join Whatsapp