ಬ್ರಿಟನ್ ನ ಬ್ಯಾಟರಿ ಸಂಸ್ಥೆಯನ್ನು 100 ಮಿಲಿಯನ್ ಬ್ರಿಟನ್ ಪೌಂಡ್ ಗೆ ಖರೀದಿಸಿದ ಅಂಬಾನಿ

Prasthutha|

- Advertisement -

ನವದೆಹಲಿ: ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟನ್ ಬ್ಯಾಟರಿ ಉತ್ಪಾದಕ ಸಂಸ್ಥೆ ಫ್ಯಾರಡಿಯನ್ ಲಿಮಿಟೆಡ್ ನ್ನು 100 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಗಳಿಗೆ ಖರೀದಿಸಿದೆ. ಈ ಸಂಸ್ಥೆ ರಿಲಾಯನ್ಸ್ ನ ಬಹು-ಬಿಲಿಯನ್ ಡಾಲರ್ ಕ್ಲೀನ್ ಎನರ್ಜಿ ವಿಭಾಗವಾಗಿರುವ ರಿಲಾಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (ಆರ್ ಎನ್‌ಇಎಸ್‌ಎಲ್) ನ ಭಾಗವಾಗಿರಲಿದೆ.

ಫ್ಯಾರಡಿಯನ್ ಲಿಮಿಟೆಡ್ ನಲ್ಲಿ ಈ ಮೂಲಕ ಶೇ.100 ರಷ್ಟು ಪಾಲನ್ನು ಹೊಂದಿರುವ ರಿಲಾಯನ್ಸ್, ಹೆಚ್ಚುವರಿಯಾಗಿ 25 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಗಳನ್ನು ಹೂಡಿಕೆ ಮಾಡಲಿದೆ. ಆಕ್ಸ್ಫರ್ಡ್ ಹಾಗೂ ಶೆಫೀಲ್ಡ್ ಮೂಲದ ಸಂಸ್ಥೆಯಾಗಿರುವ ಫ್ಯಾರಡಿಯನ್ ಲಿಮಿಟೆಡ್ ಸೋಡಿಯಮ್-ಐಯಾನ್ ಬ್ಯಾಟರಿ ತಂತ್ರಜ್ಞಾನದ ಪೇಟೆಂಟ್ ನ್ನು ಹೊಂದಿದ್ದು, ಮುಂಚೂಣಿಯಲ್ಲಿರುವ ಜಾಗತಿಕ ಮಟ್ಟದ ಬ್ಯಾಟರಿ ತಂತ್ರಜ್ಞಾನಗಳ ಕಂಪನಿಗಳ ಪೈಕಿ ಒಂದಾಗಿದೆ.

- Advertisement -

ಸೋಲಾರ್, ಬ್ಯಾಟರಿ, ಹೈಡ್ರೋಜನ್ ಸೇರಿದಂತೆ ತನ್ನ ಗ್ರೀನ್ ಎನರ್ಜಿ ಉದ್ಯಮಕ್ಕೆ ಹೊಸ ರೂಪವನ್ನು ನೀಡಲು ಆರ್ ಎನ್‌ಇಎಸ್‌ಎಲ್ ಈ ಕ್ಷೇತ್ರದಲ್ಲಿನ ಒಂದಷ್ಟು ಸಂಸ್ಥೆಗಳನ್ನು ಖರೀದಿಸಿ, ಹೂಡಿಕೆ ಮಾಡುತ್ತಿದೆ.



Join Whatsapp
Exit mobile version