ಹೊಸದಿಲ್ಲಿ: ವಜಾಗೊಂಡ ತನ್ನ ಉದ್ಯೋಗಿಗಳಿಗೆ 5 ತಿಂಗಳ ವೇತನ ನೀಡುವುದಾಗಿ ಅಮೆಜಾನ್ ಕಂಪನಿಯ ಸಿಇಒ ಆ್ಯಂಡಿ ಜೆಸ್ಸಿ ಭರವಸೆ ನೀಡಿದ್ದಾರೆ.
ಇ-ಕಾಮರ್ಸ್ ಕಂಪನಿ ಅಮೆಜಾನ್ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿರುವ 18 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಕಂಪನಿಯು ಉದ್ಯೋಗ ಕಡಿತದ ಬಗ್ಗೆ ಈ ಮೇಲ್ ಸಂದೇಶವನ್ನೂ ಕೂಡ ತನ್ನ ಉದ್ಯೋಗಿಗಳಿಗೆ ಕಳುಹಿಸಿತ್ತು.