ಶ್ರೀನಗರ: ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಆರು ಮಂದಿ ಭಕ್ತರು ಮತ್ತು ಒಬ್ಬ ಕುದುರೆ ಸವಾರ ಒಳಗೊಂಡಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಯಾತ್ರೆಯಲ್ಲಿ ಒಟ್ಟು ಸಾವಿಗೀಡಾದವರ ಸಂಖ್ಯೆ 49ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಜೂನ್ 30 ರಂದು ಆರಂಭಗೊಂಡ ಈ ಯಾತ್ರೆಯಲ್ಲಿ ಇದುವರೆಗೂ 47 ಭಕ್ತಾಧಿಗಳು ಮತ್ತು ಇಬ್ಬರು ಕುದುರೆ ಸವಾರರು ಸಾವನ್ನಪ್ಪಿದ್ದಾರೆ. ಜುಲೈ 8ರಂದು ಪ್ರವಾಹಕ್ಕೆ ಸಿಲುಕಿ 15 ಮಂದಿ ಸಾವಿಗೀಡಾದರೆ, 55 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಐತಿಹಾಸಿಕ ಅಮರನಾಥ ಗುಹೆ ದೇವಾಲಯಕ್ಕೆ ಒಟ್ಟು ಸುಮಾರು 1.5 ಲಕ್ಷ ಭಕ್ತಾದಿಗಳು ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ.