Home ಟಾಪ್ ಸುದ್ದಿಗಳು ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಅಮರೀಂದರ್ ಸಿಂಗ್‌ ?

ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಅಮರೀಂದರ್ ಸಿಂಗ್‌ ?

ನವದೆಹಲಿ: ಪಂಜಾಬ್‌ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕ್ಯಾಪ್ಟನ್ ಅಮರೀಂದರ್‌ ಸಿಂಗ್‌ ಅವರು ಹೊಸ ಪಕ್ಷ ಕಟ್ಟಲಿದ್ದಾರಾ ಎಂಬ ಕುತೂಹಲ ಹುಟ್ಟಿಕೊಂಡಿದೆ. ಅದಕ್ಕೆಕಾರಣ ಅವರ ಮಾತುಗಳ ಧಾಟಿ ನೋಡಿದರೆ ಸದ್ಯದಲ್ಲೇ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಸಾಧ್ಯತೆ ಎದ್ದು ಕಾಣುತ್ತಿದೆ.

ಅಮರೀಂದರ್ ಅವರು ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಗುರುವಾರ ಈ ಊಹಾಪೋಹಗಳಿಗೆ ಸ್ವತಃ ಅಮರೀಂದರ್‌ ಅವರೇ ತೆರೆ ಎಳೆದಿದ್ದು, ನಾನು ಕಾಂಗ್ರೆಸ್‌ನಿಂದ ಹೊರಬರುವುದು ಖಚಿತ. ಆದರೆ, ಬಿಜೆಪಿಗೆ ಹೋಗುವುದಿಲ್ಲ’ ಎಂದಿದ್ದಾರೆ.

Join Whatsapp
Exit mobile version