Home ಟಾಪ್ ಸುದ್ದಿಗಳು ಅಮಾನತುಲ್ಲಾ ಖಾನ್ ಸಹಾಯಕನ ಬಂಧನ: 12 ಲಕ್ಷ ನಗದು, ಬಂದೂಕು ಪತ್ತೆ

ಅಮಾನತುಲ್ಲಾ ಖಾನ್ ಸಹಾಯಕನ ಬಂಧನ: 12 ಲಕ್ಷ ನಗದು, ಬಂದೂಕು ಪತ್ತೆ

ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರ ನಿಕಟವರ್ತಿ ಹಮೀದ್ ಅಲಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ದಾಳಿಯ ನಂತರ ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ದೆಹಲಿ ವಕ್ಫ್ ಮಂಡಳಿಯ ನೇಮಕಾತಿಯಲ್ಲಿ ಅಕ್ರಮಗಳಿಗೆ ಸಂಬಂಧಿಸಿದಂತೆ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಎಸಿಬಿ ಶುಕ್ರವಾರ ಖಾನ್ ಅವರನ್ನು ಬಂಧಿಸಿತ್ತು.

ಒಂದು ಪರವಾನಗಿಯಿಲ್ಲದ ಆಯುಧ, 12 ಲಕ್ಷ ರೂ. ನಗದು ಮತ್ತು ಕೆಲವು ಕಾಟ್ರಿಡ್ಜ್ ಗಳನ್ನು ಅಲಿ ಅವರಿಗೆ ಸಂಬಂಧಿಸಿದ ಸ್ಥಳದಿಂದ  ಶುಕ್ರವಾರ ವಶಪಡಿಸಿಕೊಳ್ಳಲಾಗಿತ್ತು. ನಾಲ್ಕು ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ ಒಟ್ಟು 24 ಲಕ್ಷ ರೂ. ನಗದು ಮತ್ತು ಎರಡು ಪರವಾನಗಿರಹಿತ ಶಸ್ತ್ರಾಸ್ತ್ರಗಳನ್ನು ಎಸಿಬಿ ವಶಪಡಿಸಿಕೊಂಡಿದೆ.

ಶಸ್ತ್ರಾಸ್ತ್ರ ಕಾಯ್ದೆಯಡಿ ಅಲಿಯನ್ನು ಆಗ್ನೇಯ ಜಿಲ್ಲಾ ಪೊಲೀಸರು ಬಂಧಿಸಿದ್ದು, ಎಸಿಬಿಯಿಂದ ಎರಡು ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ.

ಮಂಡಳಿಯಲ್ಲಿ ನಡೆದಿದೆ ಎನ್ನಲಾದ ತಪ್ಪಿಗೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ.

Join Whatsapp
Exit mobile version