Home ಟಾಪ್ ಸುದ್ದಿಗಳು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ; ಸಿಟ್ ಪೊಲೀಸ್ ಅಧಿಕಾರಿಗಳ ಬಗ್ಗೆ ನನಗೆ ಮರುಕವಿದೆ :...

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ; ಸಿಟ್ ಪೊಲೀಸ್ ಅಧಿಕಾರಿಗಳ ಬಗ್ಗೆ ನನಗೆ ಮರುಕವಿದೆ : ಡಿ ಕೆ ಶಿವಕುಮಾರ್

ಮಂಗಳೂರು:  ಜಾರಕಿಹೊಳಿಯು ಇತ್ತೀಚೆಗೆ ಬೆಂಗಳೂರಿನಲ್ಲಿ ಸಿಡಿ ಪ್ರಕರಣದ “ಮಹಾನಾಯಕ ಡಿಕೆ ಶಿವಕುಮಾರ್” ಎಂದು ಆರೋಪಿಸಿದ್ದರು.  ಮಂಗಳೂರಿಗೆ ಇಂದು ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪಾಪ ಪೊಲೀಸ್ ಅಧಿಕಾರಿಗಳು. ನನಗೆ ಅವರ ಬಗ್ಗೆ ಮರುಕವಿದೆ. ಅವರ ಬಗ್ಗೆ ಚಿಂತಿಸುವಾಗ ದುಃಖವಾಗ್ತಿದೆ. ಸಿಡಿ ಪ್ರಕರಣವು ಯಾವುದೋ ಬೇರೆ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಸಂತ್ರಸ್ತೆ ಯುವತಿ ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಎಸ್.ಐ.ಟಿ ಮುಂದೆಯೂ ಯುವತಿ ಹೇಳಿಕೆ ನೀಡಿದ್ದಾರೆ. ನಿನ್ನೆ ಜಾರಕಿಹೊಳಿಯನ್ನು ಸಿ.ಐ.ಟಿ. ವಿಚಾರಣೆಗೆ ಕರೆದಿತ್ತು. ಆದರೆ ಜಾರಕಿಹೊಳಿ ಸಿ.ಐ.ಟಿ. ಅಧಿಕಾರಿಗಳ ಮುಂದೆ ಹಾಜರಾಗದೆ “ಜ್ವರ”ದ ಕಾರಣ ನೀಡಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಸಾಕಷ್ಟು ಪುರಾವೆಗಳು ದೊರಕಿರುವುದರಿಂದ ಜಾರಕಿಹೊಳಿಗೆ ಭಯ ಆರಂಭಗೊಂಡಿದೆ ಎಂದು ಹೇಳಲಾಗುತ್ತಿದೆ.

ಉತ್ತಮ ಹೆಸರು ಇಟ್ಟುಕೊಂಡ ಪೊಲೀಸ್ ಅಧಿಕಾರಿಗಳಿದ್ದಾರೆ. ಅವರ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಲು ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಸಿಡಿ ಪ್ರಕರಣದ ಬಗ್ಗೆ ಮಾತನಾಡುತ್ತಾ, ಈ ಬಗ್ಗೆ ಸದ್ಯ ನಾನೇನು ಪ್ರತಿಕ್ರಿಯಿಸುವುದಿಲ್ಲ. ನನಗೆ ಗೊತ್ತು,  ಯಾವ್ಯಾವ ದಿಕ್ಕಿನಲ್ಲಿ ಏನೇನು ನಡೀತಾ ಇದೆ ಎಂದು. ಆ ಕುರಿತು ಈಗ ಏನೂ ನಾನು ಮಾತನಾಡಲ್ಲ ಎಂದು ಹೇಳಿದ್ದಾರೆ.

Join Whatsapp
Exit mobile version