Home ಟಾಪ್ ಸುದ್ದಿಗಳು ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು: ಆಯವ್ಯಯದಲ್ಲಿ ಭರವಸೆ

ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು: ಆಯವ್ಯಯದಲ್ಲಿ ಭರವಸೆ

ಬೆಂಗಳೂರು: ಮಲೆನಾಡು ಪ್ರದೇಶದಲ್ಲಿ, ಕಾಣೆ, ಬಾಣೆ, ಸೊಪ್ಪಿನ ಬೆಟ್ಟ, ಹುಲ್ಲುಬನ್ನಿ ಹಾಗೂ ಸರ್ಕಾರಿ ಬೀಳು ಒಳಗೊಂಡಂತೆ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಸಾವಿರಾರು ಬಡವರು ಹಾಗೂ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ ಬಗರ್ ಹುಕುಂ ಜಮೀನನ್ನು ಮಂಜೂರು ಮಾಡಲು ಮುಖ್ಯಮಂತ್ರಿಯವರು ಇಂದು ಮಂಡಿಸಿದ ಆಯವ್ಯಯ ದಲ್ಲಿ ಭರವಸೆ ನೀಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.


ದಶಕಗಳ ಕಾಲದ ಬೇಡಿಕೆಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಈ ಕಾರಣಕ್ಕಾಗಿ ರಚಿಸಲಾದ ಸಂಪುಟದ ಉಪ ಸಮಿತಿ ನೀಡುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.


ಬಜೆಟ್’ನಲ್ಲಿ ಈ ಕುರಿತು ನಿರ್ಧಾರ ಪ್ರಕಟಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿನಂತಿಸಿದ್ದರು.
ಸಚಿವರು ಗುರುವಾರ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಬಹು ದಿನಗಳ ಕಾಲದ ಈ ಬೇಡಿಕೆಯನ್ನು ಮನ್ನಿಸಿ ಸಾವಿರಾರು ಬಡ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಬಗ್ಗೆ ಹೊಂದಿರುವ ಕನಸನ್ನು ನನಸು ಮಾಡಲು ಮನವಿ ಮಾಡಿದ್ದರು.


ಇಡೀ ವಿಶ್ವವೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ನುರಿತ ಆಡಳಿತ ಅನುಭವವಿರುವ, ಶ್ರೀ ಬಸವರಾಜ್ ಬೊಮ್ಮಾಯಿ ಅವರು ಅತ್ಯಂತ “ಜನಪರ ಹಾಗೂ ಸಮತೋಲನ”ದ ಸುಮಾರು ಮೂರುಲಕ್ಷ ರೂಪಯಿಗಳ ಮೊತ್ತದ 402, ಕೋಟಿ ರೂಪಾಯಿಗಳ ಮಿಗತೆ ಆಯವ್ಯಯವನ್ನು ಸದನದಲ್ಲಿ ಮಂಡಿಸಿದ್ದಾರೆ. ಕೃಷಿ, ಕೈಗಾರಿಕ ಮತ್ತು ಸೇವಾ ವಲಯ ಕ್ಷೇತ್ರಗಳಿಗೆ, ವೇಗ ವರ್ಧನೆ ನೀಡಲಿರುವ ಈ ಬಜೆಟ್ ರೈತರು, ಮಹಿಳೆಯರ, ದುರ್ಬಲ ವರ್ಗದವರ ಹಾಗೂ ಸಮಾಜದ ಎಲ್ಲಾ ವರ್ಗದ ಶ್ರೇಯೋಭಿವೃದ್ಧಿಗೆ ಪೂರಕವಾಗಲಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Join Whatsapp
Exit mobile version