ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ: ಸಿಬಿಐನಿಂದ ಪಿಎಚ್’ಡಿ ಸಂಶೋಧನಾರ್ಥಿ ಬಂಧನ

Prasthutha|

ನವದೆಹಲಿ: ತಮಿಳುನಾಡಿನ ತಂಜಾವೂರಿನ ನಿವಾಸಿ, 35 ವರ್ಷದ ಪಿಎಚ್‌’ಡಿ ಸಂಶೋಧನಾರ್ಥಿಯೊಬ್ಬನನ್ನು ‘ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸಿಬಿಐ ಬಂಧಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ಆರೋಪಿ ವಿರುದ್ಧ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಚಿತ್ರಗಳು ಹಾಗೂ ವಿಡಿಯೊಗಳ ಸೃಷ್ಟಿ ಹಾಗೂ ಅವುಗಳನ್ನು ಹಂಚಿಕೊಂಡ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು’ ಎಂದು ಅವರು ತಿಳಿಸಿದರು.

- Advertisement -

‘ಇಂಟರ್‌ಪೋಲ್‌ನ ದತ್ತಾಂಶ ಸಂಗ್ರಹಣೆಯಿಂದ ಈ ಚಿತ್ರಗಳು ಹಾಗೂ ವಿಡಿಯೊಗಳು ಸಿಬಿಐಗೆ ದೊರಕಿದ್ದವು. ಡಿಜಿಟಲ್ ವಿಧಿವಿಜ್ಞಾನ ಉಪಕರಣಗಳನ್ನು ಬಳಸಿಕೊಂಡು ನಡೆಸಿದ ತನಿಖೆಯಿಂದ ತಂಜಾವೂರಿನಲ್ಲಿ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ’ ಎಂದರು.

ಕೃತ್ಯಕ್ಕೆ ಬಳಸಲಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆರೋಪಿಗೆ ಸಂಬಂಧಿಸಿದ ಜಾಗಗಳಲ್ಲಿ ಶೋಧ ನಡೆಸಿ ವಶಪಡಿಸಿಕೊಳ್ಳಲಾಯಿತು’ ಎಂದು ತಿಳಿಸಿದರು.

- Advertisement -