NSAಯಂತಹ ಕಾನೂನು ಬಳಸುವಾಗ ತೀವ್ರ ಎಚ್ಚರಿಕೆಯಿರಲಿ : ಅಲಹಾಬಾದ್ ಹೈಕೋರ್ಟ್

Prasthutha|

ಅಲಹಾಬಾದ್ : ಭಯೋತ್ಪಾದನೆ ತಡೆಗಾಗಿರುವ ರಾಷ್ಟ್ರೀಯ ಭದ್ರತಾ ಕಾಯ್ದೆಯ ದುರ್ಬಳಕೆ ಮಾಡಿರುವ ಉತ್ತರ ಪ್ರದೇಶ ಸರಕಾರವನ್ನು ಅಲಹಾಬಾದ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ ಎಸ್ ಎ)ಯಡಿ ಬಂಧಿತನಾಗಿದ್ದ ವ್ಯಕ್ತಿಯನ್ನು ಬಿಡುಗಡೆಗೊಳಿಸಿದ ಕೋರ್ಟ್, ರಾಜ್ಯಕ್ಕೆ ಅತ್ಯದ್ಭುತ ಶಕ್ತಿಯನ್ನು ನೀಡುವ ಕಾನೂನನ್ನು ಬಳಸುವಾಗ ‘ತೀವ್ರ ಎಚ್ಚರಿಕೆ’ಯನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.

- Advertisement -

ಎನ್ ಎಸ್ ಎಯಡಿ ಬಂಧಿತರಾಗಿದ್ದ ಜಾವೇದ್ ಸಿದ್ದೀಕಿ ಅವರಿಗೆ ಸಂಬಂಧಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಪ್ರದೀಪ್ ಕುಮಾರ್ ಶ್ರೀವಾಸ್ತವ ಮತ್ತು ನ್ಯಾ. ಪ್ರಿಂತಿಂಕರ್ ದಿವಾಕರ್, ಬಂಧನಾದೇಶವನ್ನು ರದ್ದುಗೊಳಿಸಿ ಆದೇಶ ನೀಡಿದ್ದಾರೆ.

ಸಲಹಾ ಮಂಡಳಿಯ ಮುಂದೆ ಸರಿಯಾದ ಸಮಯಕ್ಕೆ ವರದಿಯನ್ನು ಸಲ್ಲಿಸಲು ಆಡಳಿತ ವಿಫಲವಾಗಿರುವ ಹಿನ್ನೆಲೆಯಲ್ಲಿ ಸಿದ್ದೀಕಿ ಅವರ ಬಂಧನಾದೇಶ ರದ್ದುಗೊಳಿಸಲಾಗಿದೆ.  

- Advertisement -