ಶಾಸ್ತ್ರಿ ಹೊರತುಪಡಿಸಿ ಎಲ್ಲಾ ಪ್ರಧಾನಿಗಳು ಭ್ರಷ್ಟಾಚಾರಿಗಳು: ಕಟೀಲ್

Prasthutha|

ಉಡುಪಿ: ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಯವರನ್ನು ಹೊರತು ಪಡಿಸಿ, ನೆಹರೂ ನಿಂದ ಮನಮೋಹನ್ ಸಿಂಗ್ ವರೆಗೆ ಕಾಂಗ್ರೆಸ್ ನ ಪ್ರಧಾನಿಗಳು ಭ್ರಷ್ಟಾಚಾರಿಗಳು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

- Advertisement -

ಆದರೆ ನಮ್ಮ ಪಕ್ಷ ಬಿಜೆಪಿ ತನ್ನ ಏಳು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಇಲ್ಲದೆ ಭ್ರಷ್ಟಾಚಾರ ಮುಕ್ತ ಭಾರತವನ್ನು ಮಾಡಿದೆ. ಅಧಿವೇಶನದಲ್ಲಿ ಕೇಂದ್ರ ಸರಕಾರದ ಎಲ್ಲ ಯೋಜನೆಗಳನ್ನು ವಿರೋಧಿಸುತ್ತಿದೆ. ವಿರೋಧಕ್ಕಾಗಿ ಕಾಂಗ್ರೆಸ್ ವಿರೋಧ ಪಕ್ಷವಾಗಿದೆ.

ದೇಶದ ಮೇಲೆ ಚೀನಾ ದಾಳಿ ಮಾಡಿದಾಗ ರಾಹುಲ್ ಗಾಂಧಿ ತಮಾಷೆ ಮಾಡುತ್ತಾರೆ. ಆದುದರಿಂದ ಕಾಂಗ್ರೆಸ್ ರಾಷ್ಟ್ರ ವಿರೋಧಿ ಪಕ್ಷವೇ ಹೊರತು ರಾಷ್ಟ್ರ ಭಕ್ತಿಯ ಪಕ್ಷ ಅಲ್ಲ ಎಂದು ಸಂಸದ ಕಟೀಲ್ ದೂರಿದರು.

Join Whatsapp