Home ಟಾಪ್ ಸುದ್ದಿಗಳು ಅಲಿ ಅಹ್ಮದ್ ಜಲಾಲಿಯನ್ನು ನೂತನ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಿಸಿದ ತಾಲಿಬಾನ್

ಅಲಿ ಅಹ್ಮದ್ ಜಲಾಲಿಯನ್ನು ನೂತನ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಿಸಿದ ತಾಲಿಬಾನ್

ಕಾಬೂಲ್ : ಅಫ್ಘಾನ್ ನ ನಿರ್ಗಮಿತ ಅಧ್ಯಕ್ಷರ ಅರಮನೆಯಲ್ಲಿ ಇಂದು ಭಾನುವಾರ ಅಧಿಕಾರ ಹಸ್ತಾಂತರದ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನೂತನ ಹಂಗಾಮಿ ಮುಖ್ಯಸ್ಥರಾಗಿ ಅಲಿ ಅಹ್ಮದ್ ಜಲಾಲಿಯವರನ್ನು ನೇಮಿಸಲಾಗಿದೆಯೆಂದು ರಾಷ್ಟ್ರೀಯ ಸಮನ್ವಯ ಉನ್ನತ ಮಂಡಳಿ ಮುಖ್ಯಸ್ಥರಾದ ಅಬ್ದುಲ್ಲಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಮಧ್ಯೆ ಆಂತರಿಕ ಮತ್ತು ವಿದೇಶಾಂಗ ವ್ಯವಹಾರಗಳ ಹಂಗಾಮಿ ಸಚಿವ ಅಬ್ದುಲ್ ಸತ್ತಾರ್ ಮಿರ್ಜಾಕ್ವಾಲ್ ಅವರು ಮಾತನಾಡಿ, ಮಿತ್ರರಾಷ್ಟ್ರಗಳ ಪಡೆಗಳೊಂದಿಗೆ ಸೇರಿ ಕಾಬೂಲ್ ನಗರದ ಜನತೆಗೆ ಭದ್ರತೆಯನ್ನು ನೀಡಲಾಗುವುದೆಂದು ಭರವಸೆ ನೀಡಿದರು.

ಯಾವುದೇ ಪ್ರತಿರೋಧವನ್ನು ಎದುರಿಸದ ತಾಲಿಬಾನ್ ಭಾನುವಾರ ಎಲ್ಲಾ ಕಡೆಯಿಂದಲೂ ಅಫ್ಘಾನ್ ರಾಜಧಾನಿ ಕಾಬೂಲ್ ಪ್ರವೇಶಿಸಿತು ಎಂದು ಅಫ್ಘಾನ್ ಸರ್ಕಾರ ವರದಿ ಮಾಡಿತ್ತು. ತಾಲಿಬಾನ್ ಈಗ ತನ್ನ ಸದಸ್ಯರಿಗೆ ಕಾಬೂಲ್ ಗೇಟ್ಸ್ ಬಳಿ ಕಾಯುವಂತೆ ಮತ್ತು ನಗರವನ್ನು ಪ್ರವೇಶಿಸಲು ಪ್ರಯತ್ನಿಸದಂತೆ ಆದೇಶಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಸದ್ಯ ಅಫ್ಘಾನ್ ನಲ್ಲಿ ರಾಜತಾಂತ್ರಕ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಅಫ್ಘಾನ್ ಸರ್ಕಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಸಂಪರ್ಕಿಸುವ ಸಾಧ್ಯತೆಯಿದೆ. ಈ ಮಧ್ಯೆ ಬದಲಾಗುತ್ತಿರುವ ಅಫ್ಘಾನ್ ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಏರಿ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ 126 ಪ್ರಯಾಣಿಕರೊಂದಿಗೆ ಕಾಬೂಲ್ ನಿಂದ ನಿರ್ಗಮಿಸಲಿದೆಯೆಂದು ಭಾರತೀಯ ವಿದೇಶಾಂಗ ಮೂಲಗಳು ಸ್ಪಷ್ಟಪಡಿಸಿದೆ. ಸದ್ಯ ಅಫ್ಘಾನ್ ನ ಕಾಬೂಲ್ ನಿಂದ ಎಲ್ಲಾ ರಾಷ್ಟ್ರಗಳ ರಾಯಭಾರಿಗಳನ್ನು ವಾಪಾಸು ಕರೆಯಿಸಿಕೊಳ್ಳಲಾಗಿದೆಯೆಂದು ಹೇಳಲಾಗುತ್ತಿದೆ.

Join Whatsapp
Exit mobile version