Home ಟಾಪ್ ಸುದ್ದಿಗಳು ಆಲ್ದೂರು: ಬಾಲಕಿಯರ ವಸತಿ ಶಾಲೆಗೆ ಸ್ಥಳ ಮಂಜೂರು; ಇನ್ನೂ ಪ್ರಾರಂಭವಾಗದ ಕಟ್ಟಡ ಕಾಮಗಾರಿ

ಆಲ್ದೂರು: ಬಾಲಕಿಯರ ವಸತಿ ಶಾಲೆಗೆ ಸ್ಥಳ ಮಂಜೂರು; ಇನ್ನೂ ಪ್ರಾರಂಭವಾಗದ ಕಟ್ಟಡ ಕಾಮಗಾರಿ

ಚಿಕ್ಕಮಗಳೂರು: ಆಲ್ದೂರು ಸಮೀಪದ ತುಡುಕೂರು ಗ್ರಾಮದ ತುಡುಕೂರಿನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗಾಗಿ 10 ಎಕರೆ ಜಾಗವನ್ನು ಸರ್ಕಾರ ಮೀಸಲಿಟ್ಟು ಹಲವು ವರ್ಷಗಳು ಕಳೆದಿದ್ದರೂ, ಶಾಲೆಯ ಕಟ್ಟಡ ಕಾಮಗಾರಿ ಪ್ರಾರಂಭವಾಗದ ಕಾರಣ,  ಆಲ್ದೂರು ಸುತ್ತಲಿನ ಹೋಬಳಿಗಳ ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗಿದೆ.

ಚಿಕ್ಕಮಗಳೂರು ಬೈಪಾಸ್‌ ಬಳಿಯ ಬಾಡಿಗೆ ಕಟ್ಟಡದಲ್ಲಿ 200 ವಿದ್ಯಾರ್ಥಿನಿಯರನ್ನೊಳಗೊಂಡ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನಡೆಯುತ್ತಿದ್ದು, ಶಾಲೆ ಕಟ್ಟಡ ಯಾವಾಗ ಪ್ರಾರಂಭವಾಗುತ್ತದೆ ಎಂಬುದು ಪ್ರಶ್ನೆಯಾಗಿಯೇ  ಉಳಿದಿದೆ.

‘ಆಲ್ದೂರು ವ್ಯಾಪ್ತಿಗೆ ಸೇರಿರುವ ಹೆಣ್ಣು ಮಕ್ಕಳ ವಸತಿ ಶಾಲೆಯನ್ನು ಆಲ್ದೂರು ವ್ಯಾಪ್ತಿಯಲ್ಲೇ ಬಾಡಿಗೆ ಕಟ್ಟಡ ಪಡೆದು ನಡೆಸಬಹುದಿತ್ತು. ಆದರೆ, ಇದರ ಬದಲು 18 ಕಿ.ಮೀ. ದೂರದಲ್ಲಿರುವ ಚಿಕ್ಕಮಗಳೂರಿನ ಬೈಪಾಸ್‌ನಲ್ಲಿ ನಡೆಸುತ್ತಿರುವುದು ಎಷ್ಟು ಸರಿ ಎಂಬ  ಪ್ರಶ್ನೆ ಸಾರ್ವಜನಿಕ  ವಲಯದಲ್ಲಿ ವ್ಯಾಪಕವಾಗಿದೆ.

Join Whatsapp
Exit mobile version