Home ಟಾಪ್ ಸುದ್ದಿಗಳು ಅಖ್ಲಾಕ್ ಹತ್ಯೆ ಪ್ರಕರಣ: ಬಿಜೆಪಿ ನಾಯಕನಿಗೆ 800 ರೂ. ದಂಡ

ಅಖ್ಲಾಕ್ ಹತ್ಯೆ ಪ್ರಕರಣ: ಬಿಜೆಪಿ ನಾಯಕನಿಗೆ 800 ರೂ. ದಂಡ

ನೋಯ್ಡಾ:  2015ರ ಮುಹಮ್ಮದ್ ಅಖ್ಲಾಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ  ಬಿಜೆಪಿಯ ವಿವಾದಿತ ನಾಯಕ ಸಂಗೀತ್ ಸೋಮ್ ಅವರನ್ನು ಗೌತಮ್ ಬುದ್ಧ ನಗರದ ನ್ಯಾಯಾಲಯವು ತಪ್ಪಿತಸ್ಥನೆಂದು ಘೋಷಿಸಿ, ಅವರಿಗೆ  ದಂಡ ವಿಧಿಸಿದೆ.

ಸಿಆರ್ ಪಿಸಿ ಸೆಕ್ಷನ್ 144 ಅನ್ನು ಉಲ್ಲಂಘಿಸಿದ್ದಕ್ಕಾಗಿ ಸೂರಜ್ ಪುರ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ಪ್ರದೀಪ್ ಕುಮಾರ್ ಕುಶ್ವಾಹ ಅವರು ಬಿಜೆಪಿ ಮಾಜಿ ಶಾಸಕ ಐಪಿಸಿ ಸೆಕ್ಷನ್ 188 ಅಡಿ ತಪ್ಪಿತಸ್ಥ ಎಂದು ಕಂಡುಬಂದ ಹಿನ್ನೆಲೆ 800 ದಂಡ ವಿಧಿಸಿದ್ದಾರೆ ಎಂದು ಸಹಾಯಕ ಪ್ರಾಸಿಕ್ಯೂಷನ್ ಅಧಿಕಾರಿ ಪ್ರೇಮಲತಾ ಯಾದವ್ ಹೇಳಿದ್ದಾರೆ.

ದಾದ್ರಿಯಲ್ಲಿ ಅಖ್ಲಾಕ್ ಹತ್ಯೆಗೆ ಸಂಬಂಧಿಸಿ ಹೇರಲಾಗಿದ್ದ ಸಿಆರ್ ಪಿಸಿ 144ರ ಅಡಿ ಆ ಪ್ರದೇಶದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಂದಿ ನಿಷೇಧಿತ ಪ್ರದೇಶದಲ್ಲಿ ಸೇರುವಂತಿಲ್ಲ ಎಂದು ಪ್ರೇಮಲತಾ ವಿವರಿಸಿದ್ದಾರೆ.

2015ರ ಸೆಪ್ಟೆಂಬರ್ 28ರಂದು ಗೋಹತ್ಯೆ ಮಾಡಿದ್ದಾರೆ ಎನ್ನುವ ಶಂಕೆ ಮೇಲೆ 52 ವರ್ಷದ ಮುಹಮ್ಮದ್ ಅಖ್ಲಾಕ್ ಮೇಲೆ ದಾದ್ರಿಯಲ್ಲಿ ಗುಂಪುದಾಳಿ ನಡೆಸಿ ಹತ್ಯೆ ಮಾಡಲಾಯಿತು.

Join Whatsapp
Exit mobile version