Home ಟಾಪ್ ಸುದ್ದಿಗಳು “ಯುಪಿ ಪೋಲಿಸರನ್ನು ನಂಬುವಂತಿಲ್ಲ”| ಇಬ್ಬರು ಮುಸ್ಲಿಮರ ಬಂಧನದ ಕುರಿತಂತೆ ಅಖಿಲೇಶ್ ಹೇಳಿಕೆ

“ಯುಪಿ ಪೋಲಿಸರನ್ನು ನಂಬುವಂತಿಲ್ಲ”| ಇಬ್ಬರು ಮುಸ್ಲಿಮರ ಬಂಧನದ ಕುರಿತಂತೆ ಅಖಿಲೇಶ್ ಹೇಳಿಕೆ

  ಲಖ್ನೋ: ಉತ್ತರ ಪ್ರದೇಶದಲ್ಲಿ ಅಲ್ ಖೈದಾ ಸಂಘಟನೆಗೆ ಸೇರಿದ್ದಾರೆಂದು ಆರೋಪಿಸಿ ಇಬ್ಬರನ್ನು ಬಂಧಿಸಿದ ಯುಪಿ ಪೋಲಿಸರ ನಡೆ ಸಂಶಯಾಸ್ಪದವಾಗಿದ್ದು, ಮುಂದಿನ ಚುನಾವಣೆಯನ್ನು ಗುರಿಯಾಗಿಸಿ ಈ ಬಂಧನ ನಡೆದಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಗುಡುಗಿದ್ದಾರೆ.

ಅಲ್ ಖೈದಾ ಭಯೋತ್ಪಾದಕರೆಂದು ಆರೋಪಿಸಿ ಇಬ್ಬರನ್ನು ಬಂಧಿಸಿರುವ ಕುರಿತು ತನಗೆ ಯಾವುದೇ ಮಾಹಿತಿಯಿಲ್ಲವೆಂದು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಯವರ ಕುರಿತು ವಿವರಿಸಿದ ಅಖಿಲೇಶ್ ಯಾದವ್ ಅವರು ಯುಪಿ ಪೋಲಿಸರ ವಿರುದ್ಧ ಅದರಲ್ಲೂ ವಿಶೇಷವಾಗಿ ಸರ್ಕಾರವನ್ನು ನಂಬುವಂತಿಲ್ಲವೆಂದು ಈ ಸಂದರ್ಭದಲ್ಲಿ ತಿಳಿಸಿದರು.

 ಯುಪಿ ಪೋಲಿಸರು ಭಾನುವಾರ ಅಲ್ ಖೈದಾ ಬೆಂಬಲಿತ ಸಂಘಟನೆಯಾದ ಅನ್ಸಾರ್ ಗಝ್ವತುಲ್ ಹಿಂದ್ ಗೆ ಸೇರಿದವರೆಂದು ಆರೋಪಿಸಿ ಮಿಹ್ನಾಝ್ ಅಹ್ಮದ್ ಮತ್ತು ಮಸೀರುದ್ದೀನ್ ಎಂಬ ಇಬ್ಬರನ್ನು ಯುಪಿ ಪೋಲಿಸರು ಬಂಧಿಸಿದ್ದರು. ಈ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪತ್ರಿಕಾಗೋಷ್ಟಿಯಲ್ಲಿ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.

Join Whatsapp
Exit mobile version