ಲಖನೌ: ಮತಗಟ್ಟೆ ಸಮೀಕ್ಷೆ ವೇಳೆ ಬಿಜೆಪಿ ಪರ ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿರುವವರ ಬಳಿಯೇ ಪ್ರಶ್ನೆ ಕೇಳಿ, ಉತ್ತರ ಪಡೆದು ವರದಿ ಸಿದ್ಧಪಡಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿ ಪರವಾದ ವಾತಾವರಣ ತೋರಿಸಲು ಈ ರೀತಿಯ ವರದಿ ನೀಡಲಾಗಿದೆ ಎಂದು ದೂರಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂಡಿಯಾ ಬಣದ ಗೆಲುವು ದೇಶದ ಗೆಲುವಾಗಿದೆ. ಜನರ ಗೆಲುವಾಗಿದೆ ಎಂದಿದ್ದಾರೆ.
‘ನಾವು ಮತ್ತು ನೀವು(ಮಾಧ್ಯಮದವರು) ಸೇರಿ ಪ್ರಜಾಪ್ರಭುತ್ವ ಬಲಪಡಿಸಬೇಕಿದೆ. ಬಿಜೆಪಿಯ ರ್ಯಾಲಿಗಳು ಜನರಿಲ್ಲದೆ ಭಣಗುಡುತ್ತಿದ್ದವು. ಅವರ ಟೆಂಟ್ ಗಳು ಖಾಲಿ ಇರುತ್ತಿದ್ದವು. ಅವರ ಪರವಾಗಿ ಯಾವುದೇ ವಾತಾವರಣ ಇರಲಿಲ್ಲ’ ಎಂದು ಅಖಿಲೇಶ್ ಹೇಳಿದ್ದಾರೆ.