Home ಟಾಪ್ ಸುದ್ದಿಗಳು ಅಯೋಧ್ಯೆಯಲ್ಲಿ ದೀಪಗಳಿಂದ ಎಣ್ಣೆ ಕದಿಯುತ್ತಿರುವ ಮಕ್ಕಳ ವಿಡಿಯೊ ಹಂಚಿದ ಅಖಿಲೇಶ್‌

ಅಯೋಧ್ಯೆಯಲ್ಲಿ ದೀಪಗಳಿಂದ ಎಣ್ಣೆ ಕದಿಯುತ್ತಿರುವ ಮಕ್ಕಳ ವಿಡಿಯೊ ಹಂಚಿದ ಅಖಿಲೇಶ್‌

ಲಕನೌ: ಉತ್ತರ ಪ್ರದೇಶದ ಸರಯೂ ನದಿ ದಡದಲ್ಲಿ ವಿಶ್ವದಾಖಲೆ ಬರೆದ ಲಕ್ಷ ದೀಪೋತ್ಸವದ ಇನ್ನೊಂದು‌ ಮುಖ ಇದಾಗಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ Xನಲ್ಲಿ ವೀಡಿಯೋವೊಂದನ್ನು ಹಂಚಿದ್ದಾರೆ. 22.23 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿ ಗಿನ್ನೆಸ್‌ ವಿಶ್ವ ದಾಖಲೆ ಬರೆದ ‘ದೀಪೋತ್ಸವ’ ಕಾರ್ಯಕ್ರಮದ ದೀಪಗಳಿಂದ ಎಣ್ಣೆಯನ್ನು ಕದ್ದು ಬಸಿದಿಕೊಳ್ಳುತ್ತಿರುವ ಮಕ್ಕಳ ವಿಡಿಯೊವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಅಖಿಲೇಶ್‌, ‘ದೈವಿಕ ವಿಜೃಂಭಣೆಯ ನಡುವೆ ಬಡತನ’ ಎಂದು ಬರೆದುಕೊಂಡಿದ್ದಾರೆ.

‘ದೀಪದಲ್ಲಿರುವ ಎಣ್ಣೆಯನ್ನು ಬಸಿದುಕೊಂಡು ತುಂಬಿಕೊಳ್ಳುವಷ್ಟು ಬಡತನ ಕಾಡಿದರೆ, ಅಲ್ಲಿ ಯಾವ ಆಚರಣೆಗೂ ಅರ್ಥವಿರುವುದಿಲ್ಲ. ಘಾಟಿಗಳು ಮಾತ್ರವಲ್ಲ ಪ್ರತಿಯೊಂದು ಬಡವರ ಮನೆಯಲ್ಲೂ ದೀಪ ಬೆಳಗಬೇಕು. ಇದೊಂದೇ ನಮ್ಮ ಏಕೈಕ ಆಶಯ’ ಎಂದು ಅಖಿಲೇಶ್‌ ಬರೆದಿದ್ದಾರೆ.

ನದಿ ದಡದಲ್ಲಿ ದೀಪಗಳನ್ನು ಬೆಳಗುವ ‘ದೀಪೋತ್ಸವ’ ಕಾರ್ಯಕ್ರಮವನ್ನು ಆದಿತ್ಯನಾಥ ಸರ್ಕಾರ 2017ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿತ್ತು. ಆಗ 51 ಸಾವಿರ ಮಣ್ಣಿನ ದೀಪಗಳನ್ನು ಬೆಳಗಿಸಲಾಗಿತ್ತು. 2019ರಲ್ಲಿ 4.10 ಲಕ್ಷ, 2020ರಲ್ಲಿ 6 ಲಕ್ಷ, 2021ರಲ್ಲಿ 9 ಲಕ್ಷ, ಈ ಬಾರಿ 22.23 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ತನ್ನದೇ ಗಿನ್ನೆಶ್ ದಾಖಲೆಯನ್ನು ಮುರಿದಿದೆ.

Join Whatsapp
Exit mobile version