ಕೋವಿಡ್ ಶಿಷ್ಟಾಚಾರಗಳೊಂದಿಗೆ ಅಜ್ಮೀರ್ ಶರೀಫ್ ದರ್ಗಾ ಪುನರಾರಂಭ
Prasthutha: June 28, 2021

ಅಜ್ಮೀರ್ : ರಾಜಸ್ಥಾನ ಸರಕಾರವು ಧಾರ್ಮಿಕ ಸ್ಥಳಗಳನ್ನು ಪುನರಾರಂಭಿಸಲು ಅನುಮತಿಸಿರುವುದರಿಂದ, ಕೋವಿಡ್-19 ಸುರಕ್ಷತಾ ನಿಯಮಗಳನ್ನು ಅನುಸರಿಸಿ ಪ್ರಾರ್ಥನೆ ಸಲ್ಲಿಸಲು ಸೋಮವಾರ ಅಜ್ಮೀರ್ ಶರೀಫ್ ದರ್ಗಾಕ್ಕೆ ಸಾರ್ವಜನಿಕರು ಆಗಮಿಸಿದರು.
ಕೋವಿಡ್ ಎರಡನೇ ಅಲೆ ಪ್ರೇರಿತ ನಿರ್ಬಂಧಗಳು ಮತ್ತು ಲಾಕ್ ಡೌನ್ ನಿಂದಾಗಿ ಸಾರ್ವಜನಿಕರಿಗೆ ಏಪ್ರಿಲ್ 15 ರಿಂದ ದರ್ಗಾವನ್ನು ಮುಚ್ಚಲಾಯಿತು. ಖ್ವಾಜಾ ಗರೀಬ್ ನವಾಜ್ ದರ್ಗಾದ ಆಡಳಿತ ಅಧಿಕಾರಿಗಳ ಪ್ರಕಾರ, ದರ್ಗಾದಲ್ಲಿ ಚಾದರ್ ಮತ್ತು ಹೂವುಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ.
ಅಜ್ಮೀರ್ ನ ಆರ್ಥಿಕತೆಯು ಬಹುಮುಖ್ಯವಾಗಿ ಧಾರ್ಮಿಕ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ ಮತ್ತು ಕಳೆದ ಎರಡು ತಿಂಗಳುಗಳಲ್ಲಿ, ಯಾವುದೇ ಪ್ರವಾಸಿಗರು ಅಥವಾ ಭಕ್ತರು ಇರಲಿಲ್ಲ, ಇದು ಹೆಚ್ಚಾಗಿ ಪ್ರವಾಸೋದ್ಯಮ, ಹೂವಿನ ಮಾರುಕಟ್ಟೆ ವ್ಯಾಪಾರಿಗಳ ವ್ಯವಹಾರದ ಮೇಲೆ ಪರಿಣಾಮ ಬೀರಿದೆ.
ಅಜ್ಮೀರ್ ಶರೀಫ್ ಗೌರವಾನ್ವಿತ ಸೂಫಿ ಸಂತ ಮೊಯಿನುದ್ದೀನ್ ಚಿಶ್ತ್ ಅವರ ಸೂಫಿ ಕೇಂದ್ರವಾಗಿದೆ.
