ಪುಣೆ : ಮಹಾ ವಿಕಾಸ್ ಅಘಾಡಿ ನೇತೃತ್ವದಲ್ಲಿ ನಡಯಲಿರುವ I N D I A ಒಕ್ಕೂಟದ 3 ನೇ ಸಭೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಬೆನ್ನಲ್ಲೇ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. “ಎನ್ ಸಿಪಿಯಲ್ಲಿ ಯಾವುದೇ ಬಿರುಕುಗಳಿಲ್ಲ, ಅಜಿತ್ ಪವಾರ್ ಅವರೇ ನಮ್ಮ ನಾಯಕ” ಎಂಬ ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಬಾರಾಮತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಈರುಳ್ಳಿ ರಫ್ತು ಸುಂಕದ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿಲುವಿನ ಕುರಿತು ಪ್ರಶ್ನಿಸಿದರು. ಜೊತೆಗೆ, ಈರುಳ್ಳಿ ಮೇಲಿನ ಶೇ. 40 ರಷ್ಟು ತೆರಿಗೆಯನ್ನು ಕೇಂದ್ರ ಸರ್ಕಾರ ತಗ್ಗಿಸಬೇಕು, ಈರುಳ್ಳಿ ಉತ್ಪಾದನೆಗೆ ತಗಲುವ ವೆಚ್ಚ ಅಧಿಕವಾಗುತ್ತಿದ್ದು, ಇದರಿಂದ ರೈತರು ಬೀದಿ ಪಾಲಾಗುತ್ತಿದ್ದಾರೆ. ಹಾಗೆಯೇ, ಈರುಳ್ಳಿ ಖರೀದಿಗೆ ಕೇಂದ್ರ ಸರ್ಕಾರ ನೀಡಿರುವ ಹಣ ರೈತರಿಗೆ ಸಾಕಾಗುತ್ತಿಲ್ಲ” ಎಂದರು.