Home ಟಾಪ್ ಸುದ್ದಿಗಳು ಸಿರಿಯಾ ಮೇಲೆ ವೈಮಾನಿಕ ದಾಳಿ: 9 ಸಾವು; 30ಕ್ಕೂ ಅಧಿಕ ಮಂದಿಗೆ ಗಾಯ

ಸಿರಿಯಾ ಮೇಲೆ ವೈಮಾನಿಕ ದಾಳಿ: 9 ಸಾವು; 30ಕ್ಕೂ ಅಧಿಕ ಮಂದಿಗೆ ಗಾಯ

ಡಮಾಸ್ಕಸ್‌: ವಾಯುವ್ಯ ಸಿರಿಯಾದ ತರಕಾರಿ ಮಾರುಕಟ್ಟೆಯೊಂದರ ಮೇಲೆ ಭಾನುವಾರ ವೈಮಾನಿಕ ದಾಳಿ ನಡೆದಿದ್ದು, ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ, 30ಕ್ಕೂ ಅಧಿಕಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾದ ಪಡೆಗಳೇ ಈ ದಾಳಿ ನಡೆಸಿವೆ ಎನ್ನುವ ಮಾತು ಕೇಳಿಬಂದಿದೆ. ಆದರೆ ರಷ್ಯಾ ಅಥವಾ ಸಿರಿಯಾ ಸರ್ಕಾರ ಯಾವುದೂ ದಾಳಿ ಕುರಿತು ಪ್ರತಿಕ್ರಿಯೆ ನೀಡಿಲ್ಲ. ದಾಳಿಯ ತೀವ್ರತೆ ಹೆಚ್ಚಿರುವುರಿಂದ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಸ್ಥಳೀಯಾಡಳಿತ ಸಂಸ್ಥೆ ತಿಳಿಸಿದೆ

Join Whatsapp
Exit mobile version