ಬೆಳಗಾವಿ: ತಲೆಗೆ ಗುಂಡಿಕ್ಕಿ ಆತ್ಮಹತ್ಯೆಗೆ ಶರಣಾದ ಏರ್‌ ಮ್ಯಾನ್

Prasthutha|

ಬೆಳಗಾವಿ: ಹರಿಯಾಣಾ ಮೂಲದ ಕರ್ತವ್ಯ ನಿರತ ಯೋಧನೋರ್ವ ತಲೆಗೆ ಗುಂಡಿಕ್ಕಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯ ಸಾಂಬ್ರಾ ಭಾರತೀಯ ಏರ್‌ ಮ್ಯಾನ್ ತರಬೇತಿ ಕೇಂದ್ರದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕನನ್ನು 2016ರಿಂದ ಸಾಂಬ್ರಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಯುನೆಲೆಯ ಸಿಬ್ಬಂದಿ ಹರಿಯಾಣ ಮೂಲದ ಸಂದೀಪ್ ಕುಮಾರ್ ಎಂದು ಗುರುತಿಸಲಾಗಿದೆ.  ತಲೆಗೆ ಗುಂಡು ಹಾರಿಸಿಕೊಂಡ ಯೋಧ ತೀವ್ರ ರಕ್ತಸ್ರಾವವಾಗಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಘಟನೆಗೆ ಸಂಬಂಧಿಸಿ ಮಾರೀಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -