Home ಟಾಪ್ ಸುದ್ದಿಗಳು ಸಂಸದ ಅಸದುದ್ದೀನ್ ಉವೈಸಿ ವಿರುದ್ಧ ಪ್ರಕರಣ: ಪ್ರತಿಭಟಿಸಿದ ಎಐಎಂಐಎಂ ಬೆಂಬಲಿಗರ ಬಂಧನ

ಸಂಸದ ಅಸದುದ್ದೀನ್ ಉವೈಸಿ ವಿರುದ್ಧ ಪ್ರಕರಣ: ಪ್ರತಿಭಟಿಸಿದ ಎಐಎಂಐಎಂ ಬೆಂಬಲಿಗರ ಬಂಧನ

ನವದೆಹಲಿ: ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಇದರ ವಿರುದ್ಧ ಪಕ್ಷದ ಬೆಂಬಲಿಗರು ಪಾರ್ಲಿಮೆಂಟ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಮೂವರು ಮಹಿಳೆಯರು ಸೇರಿದಂತೆ ಸುಮಾರು 25 ಪ್ರತಿಭಟನಕಾರರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ದ್ವೇಷಭಾಷಣಕ್ಕೆ ಸಂಬಂಧಿಸಿದಂತೆ ಸಂಸದ ಅಸದುದ್ದೀನ್ ಉವೈಸಿ ವಿರುದ್ಧ ಐಪಿಸಿ ಸೆಕ್ಷನ್ 295 ಎ, 153 ಎ, 505(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Join Whatsapp
Exit mobile version