ಲಕ್ನೋ: ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ದೇಣಿಗೆ ಅಭಿಯಾನದಲ್ಲಿ ಬಿಜೆಪಿ ನಾಯಕರೊಂದಿಗೆ ಸಹಕರಿಸಿದ ಉತ್ತರ ಪ್ರದೇಶ ಫೆಫಾನಾ ಕ್ಷೇತ್ರದ ಎಐಎಂಐಎಂ ಅಭ್ಯರ್ಥಿಯಾಗಿದ್ದ ಭೋಲಾ ನೇತಾಜಿ ಯಾನೆ ಮುಹಮ್ಮದ್ ಅನ್ಸಾರಿ ಎಂಬಾತನ ಅಭ್ಯರ್ಥಿ ಸ್ಥಾನವನ್ನು ಐಎಂಐಎಂ ರದ್ದುಗೊಳಿಸಿದೆ.
ಬಿಜೆಪಿಯ ದೇಣಿಗೆ ಅಭಿಯಾನದಲ್ಲಿ ಭೋಲಾ ನೇತಾಜಿ ಪಾಲ್ಗೊಂಡಿರುವ ಫೋಟೋಗಳು ವ್ಯಾಪಕವಾಗಿ ಹರಿದಾಡಿವೆ. ಈತ 2019 ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿಯನ್ನು ಶ್ಲಾಘಿಸಿದ್ದ.
‘ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದ್ದರಿಂದ, ಫೆಫಾನಾ ಕ್ಷೇತ್ರದಿಂದ ಮುಹಮ್ಮದ್ ಅನ್ಸಾರಿ (ಭೋಲಾ ನೇತಾಜಿ) ಅವರ ಅಭ್ಯರ್ಥಿ ಸ್ಥಾನವನ್ನು ರದ್ದುಗೊಳಿಸಲಾಗುತ್ತಿದೆ’. ಎಐಎಂಐಎಂ ಬಲ್ಲಿಯಾ ಜಿಲ್ಲಾಧ್ಯಕ್ಷ ಅಮಾನುಲ್ ಹಕ್ ಅವರ ಅಜ್ಞಾನದಿಂದಾಗಿ ಅಂತಹ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಬೇಕಾಯಿತು. ಹಕ್ ಅವರನ್ನು ಐದು ವರ್ಷಗಳ ಕಾಲ ಪಕ್ಷದಿಂದ ಹೊರಗಿಟ್ಟು ಎಐಎಂಐಎಂ ಬಲ್ಲಿಯಾ ಘಟಕವನ್ನು ಬರ್ಖಾಸ್ತುಸಲಾಯಿತು. ಶೀಘ್ರದಲ್ಲೇ ಹೊಸ ಸಮಿತಿ ಪ್ರಮಾಣವಚನ ಸ್ವೀಕರಿಸಲಿದೆ ಎಂದು ಎಐಎಂಐಎಂ ಉತ್ತರ ಪ್ರದೇಶ ಮುಖ್ಯಸ್ಥ ಶೌಕತ್ ಅಲಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.