Home ಟಾಪ್ ಸುದ್ದಿಗಳು ತಕ್ಷಣ ಇಂಧನ ಪೂರೈಕೆ ಆಗದಿದ್ದರೆ ಗಾಝಾದಾದ್ಯಂತ ನೆರವು ಕಾರ್ಯ ಕಡಿತ: ವಿಶ್ವಸಂಸ್ಥೆಯ ಏಜೆನ್ಸಿ

ತಕ್ಷಣ ಇಂಧನ ಪೂರೈಕೆ ಆಗದಿದ್ದರೆ ಗಾಝಾದಾದ್ಯಂತ ನೆರವು ಕಾರ್ಯ ಕಡಿತ: ವಿಶ್ವಸಂಸ್ಥೆಯ ಏಜೆನ್ಸಿ

ತಕ್ಷಣ ಇಂಧನ ಪೂರೈಕೆ ಆಗದಿದ್ದರೆ ಗಾಝಾದಾದ್ಯಂತ ನೆರವು ಕಾರ್ಯ ಕಡಿತ ಮಾಡಬೇಕಾಗುತ್ತದೆ ಎಂದು ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆಯ ಏಜೆನ್ಸಿಯು ಅಸಹಾಯಕತೆ ವ್ಯಕ್ತಪಡಿಸಿದೆ.

ಗಾಝಾದ ಪರಿಸ್ಥಿತಿ ಶೋಚನೀಯವಾಗಿದ್ದು, ಅಗತ್ಯ ವಸ್ತುಗಳ ಸಂಗ್ರಹವು ಖಾಲಿಯಾಗುತ್ತಿದ್ದು, ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಗಾಜಾದ ಆಸ್ಪತ್ರೆಗಳು ಹೆಣಗುತ್ತಿವೆ.

ಗಾಯಾಳುಗಳಲ್ಲಿ ಹಲವರನ್ನು ಸರಳವಾದ ವೈದ್ಯಕೀಯ ನೆರವೂ ಇಲ್ಲದೆ ಆಸ್ಪತ್ರೆಗಳಲ್ಲಿ ನೆಲದ ಮೇಲೆ ಮಲಗಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆ ಪಡೆಯಬೇಕಾದವರು ದಿನಗಟ್ಟಲೆ ಕಾಯಬೇಕಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಆರು ಲಕ್ಷ ಮಂದಿ ವಿಶ್ವಸಂಸ್ಥೆಯ ಶಿಬಿರಗಳಲ್ಲಿ ನೆರವು ಪಡೆದಿದ್ದಾರೆ. ಗಾಝಾದ 23 ಲಕ್ಷ ಜನರ ಪೈಕಿ ಸುಮಾರು 14 ಲಕ್ಷ ಜನರು ಗಾಝಾದಲ್ಲಿಯೇ ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಕೆಲವು ಅಗತ್ಯ ವಸ್ತುಗಳನ್ನು ಈಜಿಪ್ಟ್‌ ಕಡೆಯಿಂದ ಗಾಝಾ ಪಟ್ಟಿಗೆ ಸಾಗಿಸಲು ಇಸ್ರೇಲ್ ಅನುಮತಿ ನೀಡಿದ್ದರೂ ಇಂಧನ ಪೂರೈಕೆಗೆ ಅವಕಾಶ ಕಲ್ಪಿಸಿಲ್ಲ.

Join Whatsapp
Exit mobile version