ಎಐಎಡಿಎಂಕೆ ಮತ್ತು ಎಸ್ ಡಿಪಿಐ ಮೈತ್ರಿ: ದಿಂಡಿಗಲ್ ಕ್ಷೇತ್ರದಿಂದ SDPI ಸ್ಪರ್ಧೆ

Prasthutha|

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಎಸ್ ಡಿಪಿಐ ಮೈತ್ರಿ ಸಾಧಿಸಿದ್ದು, ಇಂದು ಚೆನ್ನೈಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.

- Advertisement -

ಎನ್ ಡಿಎಯಿಂದ ಹೊರಬಂದು ಬಿಜೆಪಿಯ ವಿರುದ್ಧ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುತ್ತಿರುವ ಎಐಎಡಿಎಂಕೆ ಲೋಕಸಭಾ ಚುನಾವಣೆಯಲ್ಲಿ ಇತರ ಪಕ್ಷಗಳೊಂದಿಗೆ ಸೇರಿ ಮೈತ್ರಿಕೂಟವನ್ನು ಏರ್ಪಡಿಸಿದೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಎಸ್ ಡಿಪಿಐ ತಮಿಳುನಾಡು ರಾಜ್ಯಾಧ್ಯಕ್ಷ ಮುಹಮ್ಮದ್ ಮುಬಾರಕ್ ಮುಂತಾದವರು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದರು. ಎಸ್ ಡಿಪಿಐ ದಿಂಡಿಗಲ್ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದು, ಅಭ್ಯರ್ಥಿಯಾಗಿ ಮುಹಮ್ಮದ್ ಮುಬಾರಕ್ ಕಣಕ್ಕಿಳಿಯಲಿದ್ದಾರೆ.



Join Whatsapp