ಕಿರುಕುಳ ನೀಡುವ ಬಜರಂಗದಳಕ್ಕೂ, ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ: ಎಚ್ ವಿಶ್ವನಾಥ್

Prasthutha|

ಮಡಿಕೇರಿ: ಜನರಿಗೆ ಕಿರುಕುಳ ನೀಡುವ ಬಜರಂಗದಳಕ್ಕೂ ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.

- Advertisement -


ಈ ಬಗ್ಗೆ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳದವರು ನೈತಿಕ ಪೊಲೀಸ್ ಗಿರಿ ಮಾಡುತ್ತಾರೆ. ಜನರಿಗೆ ಪಾರ್ಕಲ್ಲಿ ಒಟ್ಟಿಗೆ ಓಡಾಡಲು ಬಿಡುವುದಿಲ್ಲ. ಇವರು ಸಮಾಜದಲ್ಲಿ ಅಶಾಂತಿಗೆ ಕಾರಣರಾಗಿದ್ದಾರೆ. ಆಂಜನೇಯ ಯಾವತ್ತೂ ಕಿರುಕುಳ ಕೊಟ್ಟವನಲ್ಲ. ಆದರೆ ಬಜರಂಗದಳದವರು ಕಾನೂನು ಕೈಗೆ ತೆಗೆದುಕೊಂಡು ಎಷ್ಟೋ ಸಾವುಗಳಿಗೆ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರ ಹೆಣ್ಣು ಮಕ್ಕಳು ಬೇರೆ ಧರ್ಮದವರನ್ನು ಮದುವೆ ಆಗಿಲ್ಲವೇ? ಲವ್ ಮಾಡಿಲ್ಲವೇ? ಪ್ರತಿ ಮಾತಿಗೂ ಆಂಜನೇಯ ಎಂದು ಹೇಳುವುದು ಸರಿಯಲ್ಲ. ಭಜರಂಗದಳ ಒಂದು ಸಂಘಟನೆ ಮಾತ್ರ ಎಂದಿದ್ದಾರೆ.