Home ಟಾಪ್ ಸುದ್ದಿಗಳು ರಾಜೀವ್ ಗಾಂಧಿ ಹತ್ಯೆ ತನಿಖೆಗೆ ರಚಿಸಲಾದ ಸಂಸ್ಥೆ ರದ್ದು

ರಾಜೀವ್ ಗಾಂಧಿ ಹತ್ಯೆ ತನಿಖೆಗೆ ರಚಿಸಲಾದ ಸಂಸ್ಥೆ ರದ್ದು

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಬಗ್ಗೆ ತನಿಖೆ ನಡೆಸಲು ರಚಿಸಲಾದ ಬಹು-ಶಿಸ್ತಿನ ಮೇಲ್ವಿಚಾರಣಾ ಸಂಸ್ಥೆಯನ್ನು ಸರ್ಕಾರ ರದ್ದುಗೊಳಿಸಿದೆ.

ಕೇಂದ್ರೀಯ ತನಿಖಾ ದಳ (ಸಿಬಿಐ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 24 ವರ್ಷ  ಹಳೆಯದಾದ ಎಂಡಿಎಂಎ,  ಅನೇಕ ಕೇಂದ್ರೀಯ ಭದ್ರತಾ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡಿತ್ತು.

ಸಮಿತಿಯನ್ನು ರದ್ದುಗೊಳಿಸುವ  ಆದೇಶವನ್ನು ಮೇ ತಿಂಗಳಲ್ಲಿ ಹೊರಡಿಸಲಾಗಿದ್ದು, ಉಳಿದಿರುವ ತನಿಖೆಯನ್ನು ಸಿಬಿಐನ ಬೇರೆ ಘಟಕಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version