Home ಟಾಪ್ ಸುದ್ದಿಗಳು ರಾಜ್ಯೋತ್ಸವ ಪ್ರಶಸ್ತಿಗೆ ವಯೋಮಿತಿ ಬದಲಾವಣೆಯಾಗಬೇಕಿದೆ: ಸಿ ಎಂ ಬೊಮ್ಮಾಯಿ

ರಾಜ್ಯೋತ್ಸವ ಪ್ರಶಸ್ತಿಗೆ ವಯೋಮಿತಿ ಬದಲಾವಣೆಯಾಗಬೇಕಿದೆ: ಸಿ ಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿಗೆ ನಿಗದಿ ಪಡಿಸಿರುವ 60 ವರ್ಷದ ವಯೋಮಿತಿಯನ್ನು ಬದಲಿಸಬೇಕು. ವಯಸ್ಸಿನ ಮಿತಿ ಹೇರಿ ಸರ್ಕಾರ ತಪ್ಪು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ವಿವಿಧ ಕ್ಷೇತ್ರದ 67 ಸಾಧಕರು ಹಾಗೂ 10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುವುದಕ್ಕೂ ಮೊದಲು ಮಾತನಾಡಿದ ಅವರು ಈ ಹೇಳಿಕೆಯನ್ನು ನೀಡಿದರು.


ಕಿರಿಯ ವಯಸ್ಸಿನಲ್ಲಿ ಸಾಧಿಸಿದ್ದರೂ 60 ವರ್ಷದ ತನಕ ರಾಜ್ಯೋತ್ಸವ ಪ್ರಶಸ್ತಿಗೆ ಕಾಯಬೇಕಾದ ಈ ನಿಯಮ ಸರಿಯಾದ ಕ್ರಮವಲ್ಲ ಸಣ್ಣ ವಯಸ್ಸಿನಲ್ಲಿಯೇ ಸಾಧಕರನ್ನು ಗುರುತಿಸಿದರೆ ಇತರರಿಗೂ ಪ್ರೇರಣೆ ಆಗಲಿದೆ ಎಂದು ಹೇಳಿದರು.

Join Whatsapp
Exit mobile version