Home ಟಾಪ್ ಸುದ್ದಿಗಳು 36 ಮಂದಿಯ ಸಾವಿನ ಬಳಿಕ ದೇವಾಲಯದ ಒಂದು ಭಾಗವನ್ನು ಬುಲ್ಡೋಜರ್ ಮೂಲಕ ತೆರವು ಮಾಡಿದ ಪಾಲಿಕೆ

36 ಮಂದಿಯ ಸಾವಿನ ಬಳಿಕ ದೇವಾಲಯದ ಒಂದು ಭಾಗವನ್ನು ಬುಲ್ಡೋಜರ್ ಮೂಲಕ ತೆರವು ಮಾಡಿದ ಪಾಲಿಕೆ

ಇಂದೋರ್: 36 ಜನರನ್ನು ಬಲಿ ಪಡೆದುಕೊಂಡ ಇಂದೋರ್ ಮೆಟ್ಟಿಲು ಬಾವಿ ದುರಂತದ ಬಳಿಕ ಐದು ಬುಲ್ಡೋಜರ್ ಗಳು ಬಾಲೇಶ್ವರ ಮಹಾದೇವ ಮಂದಿರದ ಅಕ್ರಮ ನಿರ್ಮಾಣ ಭಾಗವನ್ನು ಉರುಳಿಸಿದವು.


ಸೋಮವಾರ ಬೆಳಿಗ್ಗೆ ಇಂದೋರ್ ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳು ಅಕ್ರಮ ದೇವಸ್ಥಾನದ ಭಾಗದ ಬಳಿಗೆ ಬುಲ್ಡೋಜರ್ ಸಹಿತ ಬಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಒಡೆದು ಹಾಕಿದರು.
ನಾಲ್ಕು ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ಸುತ್ತ ಕಾವಲು ನಿಲ್ಲಿಸಲಾಗಿತ್ತು. ಜಿಲ್ಲಾ ಮ್ಯಾಜಿಸ್ಟ್ರೇಟ್, ಉಪ ಮನಪಾ ಆಯುಕ್ತ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾವಿಗೀಡಾದವರ ಅದರಲ್ಲೂ ಒಂದಕ್ಕಿಂತ ಹೆಚ್ಚು ಕುಟುಂಬ ಸದಸ್ಯರನ್ನು ಕಳೆದುಕೊಂಡವರು ದೇವಾಲಯ ಅಕ್ರಮ ನಿರ್ಮಾಣ ಬಗ್ಗೆ ದೂರು ನೀಡಿದ್ದರು. ಮೆಟ್ಟಿಲು ಬಾವಿ ಭಾಗದ್ದು ಅಕ್ರಮ ನಿರ್ಮಾಣವಾಗಿದ್ದು, ಕಳೆದ ವರ್ಷವೇ ಮುನ್ಸಿಪಾಲಿಟಿಯವರು ಅದನ್ನು ಒಡೆಯಲು ಗುರುತು ಮಾಡಿದ್ದರು. ಆದರೆ ಆಲಯ ಟ್ರಸ್ಟ್ ನವರು ಧಾರ್ಮಿಕ ಭಾವನೆಯ ತಡೆ ಇಟ್ಟಿದ್ದರು.
ಇಂದೋರ್ ನ ಅತಿ ಹಳೆಯ ಜನ ವಸತಿ ಪ್ರದೇಶ ಸ್ನೇಹ್ ನಗರದಲ್ಲಿ ಈ ಖಾಸಗಿ ನಿರ್ವಹಣಾ ಟ್ರಸ್ಟ್ ನ ಆಲಯವಿದೆ.


200 ವರ್ಷಗಳಿಗೂ ಹೆಚ್ಚು ಹಳೆಯ ಮೆಟ್ಟಿಲು ಬಾವಿ ಮೇಲೆ ನಾಲ್ಕು ಕಬ್ಬಿಣದ ಕಂಬಿ ಹಾಸಿ ಕಾಂಕ್ರೀಟ್ ಸ್ಲಾಬ್ ಹಾಸಿದ್ದರು. ಅದು ರಾಮ ನವಮಿಯಂದು ಜನ ಭಾರವನ್ನು ತಡೆಯದೆ ಬಿದ್ದು ದುರಂತಕ್ಕೆ ಕಾರಣವಾಗಿತ್ತು.
ಅಲ್ಲಿ ಅಕ್ರಮವಾಗಿ ಗೋಡೆ ನಿರ್ಮಿಸಿ ಶೆಡ್ ಮಾಡಲಾಗಿತ್ತು. ಅಲ್ಲಿ ಹೋಮ ಹವನ, ಜನ ಸೇರುವುದು ನಡೆಯತೊಡಗಿತ್ತು.


ಸಾಂಪ್ರದಾಯಿಕ ಮೆಟ್ಟಿಲು ಬಾವಿಗಳನ್ನು ಪಟ್ಟಿ ಮಾಡಿ ಅವುಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಜಿಲ್ಲಾಧಿಕಾರಿಗಳಿಗೆ ಭಾನುವಾರ ಸೂಚನೆ ನೀಡಿದ್ದರು. ಯಾವುದನ್ನಾದರೂ ಮುಚ್ಚಿದ್ದರೆ ಅವುಗಳನ್ನು ತೆರೆಸುವಂತೆಯೂ ಅವರು ತಿಳಿಸಿದ್ದಾರೆ.

Join Whatsapp
Exit mobile version