ನವದೆಹಲಿ: ದೇಶದಲ್ಲಿ ಮುಸ್ಲಿಮರ ಬಳಿಕ ಇದೀಗ ಕ್ರಿಶ್ಚಿಯನ್ನರನ್ನು ಫ್ಯಾಶಿಸ್ಟ್ ವರ್ಗ ಗುರಿಯಾಗಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.
ಮಿಷನರೀಸ್ ಆಫ್ ಚಾರಿಟಿ (ಎಫ್.ಸಿ.ಆರ್.ಎ) ನೋಂದಣಿಯನ್ನು ನವೀಕರಿಸಲು ಸರ್ಕಾರ ನಿರಾಕರಿಸಿದ್ದನ್ನು ಉಲ್ಲೇಖಿಸಿ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಗೋವಾದ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿರುವ ಚಿದಂಬರಂ, ಮಿಷನರೀಸ್ ಆಫ್ ಚಾರಿಟಿ (MoC) ಗೆ ಸಂಬಂಧಿಸಿದ ಗೃಹ ಸಚಿವಾಲಯದ ಕ್ರಮವನ್ನು ಮುಖ್ಯ ಮಾಹಿನಿಯ ಮಾಧ್ಯಮಗಳು ವರದಿ ಮಾಡದಿರುವುದು ದುಃಖದಾಯಕ ಮತ್ತು ನಾಚಿಕೆಗೇಡಿನ ಪರಮಾವಧಿ ಎಂದು ಬಣ್ಣಿಸಿದ್ದಾರೆ.
ತನ್ನ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಚಿದಂಬರಂ, “MoC ಗೆ ನವೀಕರಣದ ನಿರಾಕರಣೆ ಭಾರತದ ಬಡವ ಮತ್ತು ನಿರ್ಗತಿಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿರುವ NGO ಗಳ ಮೇಲಿನ ನೇರ ದಾಳಿ” ಎಂದು ಬಣ್ಣಿಸಿದ್ದಾರೆ.