Home ಟಾಪ್ ಸುದ್ದಿಗಳು ಅಫ್ಘಾನಿಸ್ತಾನದಲ್ಲಿ ಭೂಕಂಪ: ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆ

ಅಫ್ಘಾನಿಸ್ತಾನದಲ್ಲಿ ಭೂಕಂಪ: ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆ

ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಶನಿವಾರ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 4 ಸಾವಿರ ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


6.2 ತೀವ್ರತೆಯ ಎರಡು ಭೂಕಂಪಗಳಲ್ಲಿ ಸುಮಾರು 2,000 ಮನೆಗಳು ನೆಲಸಮವಾಗಿದೆ ಎಂದು ಅಫ್ಘಾನಿಸ್ತಾನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಅಂಕಿಅಂಶಗಳ ಪ್ರಕಾರ ಇಲ್ಲಿಯವರೆಗೆ ಸಾವು -ನೋವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆಯಾಗಿದೆ ಎಂದು ಎಎನ್ ಡಿಎಮ್ ಎ ಹೇಳಿದೆ.


ಸೋಮವಾರ ನೀಡಿದ ವರದಿಗಳ ಪ್ರಕಾರ 2,400 ಜನ ಸಾವನ್ನಪ್ಪಿದರು ಎಂದು ಹೇಳಲಾಗಿತ್ತು. ಹೆರಾತ್ ನ ಜಿಂದಾ ಜನ್ ಜಿಲ್ಲೆಯ 13 ಹಳ್ಳಿಗಳಲ್ಲಿ ವಾಸಿಸುತ್ತಿದ್ದವರು ಹೆಚ್ಚಿನ ಮಂದಿ ಭೂಕಂಪಕ್ಕೆ ಬಲಿಯಾಗಿದ್ದಾರೆ.

Join Whatsapp
Exit mobile version