ಬೆಂಗಳೂರು: ಜಾರಕಿಹೊಳಿಗೆ ಕರೋನಾ ಪಾಸಿಟಿವ್ ಬಂದಿದೆ. ಜಾರಕಿಹೊಳಿಯನ್ನು ವಿಚಾರಣೆ ನಡೆಸಿದ ಅಧಿಕಾರಿಗಳನ್ನು ಕ್ವಾರೆಂಟೈನ್ ಮಾಡ್ತಾರಾ? ಎಂದು ಸಂತ್ರಸ್ತೆ ಯುವತಿ ಪರ ವಕೀಲರ ತಂಡದಲ್ಲಿ ಒಬ್ಬರಾದ ಸೂರ್ಯ ಮುಕುಂದರಾಜ್ ಪ್ರಶ್ನಿಸಿದ್ದಾರೆ.
ಮಾಜಿ ಸಚಿವ , ಶಾಸಕ ರಮೇಶ್ ಜಾರಕಿಹೊಳಿಗೆ ಕರೋನಾ ಪಾಸಿಟಿವ್ ಬಂದಿದೆ ಎಂದು ಸಚಿವ ಬೈರತಿ ಬಸವರಾಜ್ ಬೆಳಗಾವಿಯಲ್ಲಿ ಇಂದು ಹೇಳಿಕೆ ನೀಡಿದ್ದು ಜಾರಕಿಹೊಳಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಪ್ರಾರಂಭಗೊಂಡಿದ್ದು, ಇದೊಂದು ಪೂರ್ವನಿಯೋಜಿತ ಡ್ರಾಮಾವೆಂದು ವಕೀಲರಾದ ಜಗದೀಶ್ ಪ್ರತಿಕ್ರಿಯಿಸಿದ್ದರು.
ನ್ಯಾಯವಾದಿ ಸೂರ್ಯ ಮುಕುಂದರಾಜ್ ಮಾತನಾಡುತ್ತಾ, ಪಾಪ ಜಾರಕಿಹೊಳಿ ಎಮರ್ಜೆನ್ಸಿಯಾಗಿ ಇಮ್ಯೂನಿಟಿ ಬೂಸ್ಟ್ ಆಗ್ಬೇಕು ಎಂದು ವ್ಯಂಗ್ಯವಾಡಿದ್ದಾರೆ. ಜಾರಕಿಹೊಳಿಗೆ ಕರೋನಾ ಪಾಸಿಟಿವ್ ದೃಢವಾಗಿದ್ದರೆ ಅವರನ್ನು ವಿಚಾರಣೆಗೊಳಪಡಿಸಿದ ತನಿಖಾಧಿಕಾರಿಗಳನ್ನು ಕ್ವಾರಂಟೈನ್ ಗೊಳಪಡಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಅವರಿಗೆ ಸಿಡಿ ಮೇಲೆ ಡೌಟ್ ಇರುವಂತೆ ನಮಗೆ ಕೋವಿಡ್ ಟೆಸ್ಟ್ ಮೇಲೂ ಡೌಟ್ ಇದೆ ಎಂದು ಹೇಳಿದ್ದಾರೆ.