ಟೆಹ್ರಾನ್: ಇಸ್ರೇಲ್’ನ ಟೆಲ್ ಅವಿವ್, ಹೈಫಾದ ಮೇಲೆ ದಾಳಿ ಮಾಡಲು ವಿನ್ಯಾಸಗೊಳಿಸಲಾದ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಇರಾನ್ ಘೋಷಣೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇರಾನ್ ಸೈನ ಜಂಟಿ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಕಿಯೋಮರ್ಸ್ ಹೈದರಿ, ಇಸ್ರೇಲ್’ನ ಟೆಲ್ ಅವಿವ್, ಹೈಫಾವನ್ನು ಹೊಡೆದುರುಳಿಸಲು ಇರಾನ್ ದೀರ್ಘ – ಶ್ರೇಣಿಯ ಆತ್ಮಹತ್ಯಾ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದ್ದಾರೆ.
ಅರಾಶ್ – 2 ಎಂಬ ಹೆಸರಿನ ಡ್ರೋನ್, ಅರಾಶ್ – 1 ನ ಹೊಸ ಆವೃತ್ತಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.