Home ಕರಾವಳಿ ಮಂಗಳೂರಿನಲ್ಲಿ ದೇಶವಿರೋಧಿ ಬ್ಯಾನರ್ ಅಳವಡಿಕೆ: ಸಾರ್ವಜನಿಕ ಆಕ್ರೋಶದ ಬಳಿಕ ತೆರವು

ಮಂಗಳೂರಿನಲ್ಲಿ ದೇಶವಿರೋಧಿ ಬ್ಯಾನರ್ ಅಳವಡಿಕೆ: ಸಾರ್ವಜನಿಕ ಆಕ್ರೋಶದ ಬಳಿಕ ತೆರವು

ಮಂಗಳೂರು: ಮಂಗಳೂರಿನ ಪರಾರಿ ಎಂಬಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ವತಿಯಿಂದ ದೇಶದ ಪ್ರಜಾಪ್ರಭುತ್ವವನ್ನು ಅಣಕಿಸುವ ಹಾಗೂ ಸಂವಿಧಾನ ವಿರೋಧಿಯಾದ “ ಹಿಂದೂ ರಾಷ್ಟ್ರ” ಎಂಬ ದೇಶದ್ರೋಹಿ ಬ್ಯಾನರ್ ಅಳವಡಿಸಿದ್ದು, ಸಾರ್ವಜನಿಕರ ಆಕ್ರೋಶದ ಬಳಿಕ ಪೊಲೀಸರು ಬ್ಯಾನರ್ ತೆರವುಗೊಳಿಸಿದ್ದಾರೆ.

ಪ್ರಜಾಪ್ರಭುತ್ವ ದೇಶವಾದ ಭಾರತವನ್ನು ಹಿಂದೂ ರಾಷ್ಟ್ರ ಎಂದು ಕರೆಯುವುದು ದೇಶದ್ರೋಹವಾಗಿದೆ. ಈ ಬ್ಯಾನರ್ ನಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರಲಿದೆ. ತಕ್ಷಣ ಇದನ್ನು ತೆರವುಗೊಳಿಸಬೇಕು ಎಂದು ಎಸ್ ಡಿಪಿಐ ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಸದಸ್ಯರಾದ ಅಝರ್ ಉಳಾಯಿಬೆಟ್ಟು ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದರು.

ವಿಷಯದ ಗಂಭೀರತೆ ಅರಿತ ವಾಮಂಜೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ದೇಶವಿರೋಧಿಯಾದ ಬ್ಯಾನರನ್ನು ತೆರವುಗೊಳಿಸಿ ಸಂಘಪರಿವಾರದ ಷಡ್ಯಂತರವನ್ನು ವಿಫಲಗೊಳಿಸಿದರು.

Join Whatsapp
Exit mobile version