Home ಟಾಪ್ ಸುದ್ದಿಗಳು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಚರ್ಚೆ ಮೇಲೆ ವಿಸ್ತರಿಸಿದ ಗದ್ದಲ; ರಾಜ್ಯಸಭೆ ಮುಂದೂಡಿಕೆ

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಚರ್ಚೆ ಮೇಲೆ ವಿಸ್ತರಿಸಿದ ಗದ್ದಲ; ರಾಜ್ಯಸಭೆ ಮುಂದೂಡಿಕೆ


ನವದೆಹಲಿ: ಹಿಂಡನ್ ಬರ್ಗ್ ವರದಿಯ ಮೇಲೆ ಅದಾನಿಯವರ ಅವ್ಯವಹಾರದ ತನಿಖೆ ನಡೆಸುವುದಾದರೆ ಬೇರೆಲ್ಲವನ್ನೂ ಬಿಟ್ಟು ಕಲಾಪಕ್ಕೆ ಸಹಕರಿಸುವುದಾಗಿ ಪ್ರತಿಪಕ್ಷಗಳು ಹೇಳಿದ್ದರೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸೋಮವಾರ ಯಾವುದೇ ಪ್ರಯೋಜನವಾಗಲಿಲ್ಲ.


ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಕಡತದಿಂದ ಹಿಂಪಡೆದುದನ್ನು ವಿರುದ್ಧ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಪ್ರಶ್ನೆಗಳು ಜೋರಾದುದರಿಂದ ರಾಜ್ಯ ಸಭೆಯು ಕೂಡಲೆ ಮುಂದೂಡಲ್ಪಟ್ಟಿತು. ಲೋಕ ಸಭೆಯಲ್ಲೂ ಹಗ್ಗ ಜಗ್ಗಾಟದ ಹೊರತು ಕಲಾಪವೇನೂ ನಡೆಯಲಿಲ್ಲ.


ಇಂದು ಮುಂಜಾನೆ ಮಲ್ಲಿಕಾರ್ಜುನ ಖರ್ಗೆಯವರು ಪ್ರತಿ ಪಕ್ಷಗಳ ಕೆಲವು ನಾಯಕರುಗಳೊಡನೆ ಸಭೆ ನಡೆಸಿದರು. ಸಂಸದ ರಜನಿ ಪಟೇಲರ ಅಮಾನತು, ರಾಹುಲ್ ಗಾಂಧಿಯವರ ಹೇಳಿಕೆಯ ಮೇಲೆ ಇತ್ಯಾದಿ ಯಾವುದನ್ನೂ ಕೇಳದೆ ಹಿಂಡೆನ್ ಬರ್ಗ್ ಅದಾನಿ ಅವ್ಯವಹಾರದ ಚರ್ಚೆಗೆ ಪಟ್ಟು ಹಿಡಿಯಲು ತೀರ್ಮಾನಿಸಲಾಯಿತು. ಆದರೆ ಈ ಬಗ್ಗೆ ಚರ್ಚೆ ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದ್ದರಿಂದ ಕೋಲಾಹಲ ಗದ್ದಲ ಉಂಟಾಗಿ ಕಲಾಪ ಮುಂದೂಡಲಾಗಿದೆ ಎಂದು ಘೋಷಿಸಲಾಯಿತು.

Join Whatsapp
Exit mobile version