Home ಟಾಪ್ ಸುದ್ದಿಗಳು ಜೈಲಿಗೆ ಆಹಾರ ತರಿಸಿಕೊಂಡರೆ ಜೈಲು ಅಧಿಕಾರಿಗೂ, ತರಿಸಿಕೊಂಡವರಿಗೂ ಹೆಚ್ಚುವರಿ ಶಿಕ್ಷೆ: ಆರಗ ಜ್ಞಾನೇಂದ್ರ

ಜೈಲಿಗೆ ಆಹಾರ ತರಿಸಿಕೊಂಡರೆ ಜೈಲು ಅಧಿಕಾರಿಗೂ, ತರಿಸಿಕೊಂಡವರಿಗೂ ಹೆಚ್ಚುವರಿ ಶಿಕ್ಷೆ: ಆರಗ ಜ್ಞಾನೇಂದ್ರ

ಬೆಂಗಳೂರು: ಕೈದಿಗಳಿಗೆ ಹೊರಗಡೆಯಿಂದ ಏನನ್ನಾದರೂ ತಂದು ಕೊಟ್ಟರೆ ಜೈಲು ಅಧಿಕಾರಿಗಳಿಗೆ 5 ವರ್ಷ ಜೈಲು ಶಿಕ್ಷೆ, ತರಿಸಿಕೊಂಡವರಿಗೆ ಅವರ ಸೆರೆವಾಸ ಮುಗಿದ ಬಳಿಕ ಪುನಃ 5 ವರ್ಷ ಶಿಕ್ಷೆ ಮುಂದುವರಿಸುವ ಕಾನೂನು ಜಾರಿಗೆ ತಂದಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.

ಜೈಲಿನಲ್ಲಿ ಬಿರಿಯಾನಿ ತರಿಸಿ ತಿನ್ನುತ್ತಿದ್ದಾರೆ. ಮದ್ಯ ಸೇವಿಸುತ್ತಿದ್ದಾರೆ. ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಮಾಧಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಇದು ಸೆರೆಮನೆಯೋ, ಅರಮನೆಯೋ ಎಂಬ ಎಂಬ ಸಾರ್ವಜನಿಕ ವಲಯದ ಆರೋಪಗಳಿಗೆ  ಗೃಹ ಸಚಿವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಜೈಲಿನಲ್ಲಿರುವ ಕೈದಿಗಳಿಗೆ ಯಾರೂ ಕೂಡ ಹೊರಗಡೆಯಿಂದ ಏನನ್ನಾದರೂ ತಂದು ಕೊಡಬಾರದು, ಮಾದಕ ವಸ್ತು ಸೇವಿಸಲು ಸಹಾಯ ಮಾಡಬಾರದು ಎಂದು ಆದೇಶಿಸಿದ್ದಾರೆ.

Join Whatsapp
Exit mobile version