Home ಟಾಪ್ ಸುದ್ದಿಗಳು ಅದಾನಿ ಗ್ರೂಪ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿ, ಹರಾಜು ಹಾಕಬೇಕು: ಸುಬ್ರಹ್ಮಣ್ಯ ಸ್ವಾಮಿ

ಅದಾನಿ ಗ್ರೂಪ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿ, ಹರಾಜು ಹಾಕಬೇಕು: ಸುಬ್ರಹ್ಮಣ್ಯ ಸ್ವಾಮಿ

ನವದೆಹಲಿ: ‘ಅದಾನಿ ಗ್ರೂಪ್ ಆಸ್ತಿಗಳನ್ನೆಲ್ಲಾ ರಾಷ್ಟ್ರೀಕರಣಗೊಳಿಸಿ, ಹರಾಜು ಹಾಕಬೇಕು. ಬಂದ ಹಣವನ್ನು ನಷ್ಟ ಅನುಭವಿಸಿದವರಿಗೆ ಸಹಾಯ ಮಾಡಬೇಕು’ ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಆಗ್ರಹಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ತನ್ನ ಪಾವಿತ್ರ್ಯತೆಯನ್ನು ಸಾಬೀತುಪಡಿಸಲು ಅದಾನಿಯ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸುವುದಕ್ಕಿಂತ ಬೇರೆ ಪರ್ಯಾಯವಿಲ್ಲ. ಪ್ರಧಾನಿ ಮೋದಿ ಏನನ್ನೋ ಮರೆಮಾಚುತ್ತಿದ್ದಾರೆಂಬ ಅನುಮಾನ ಜನರಲ್ಲಿ ಮೂಡಿದೆ. ಅದನ್ನು ಸರಿಪಡಿಸಬೇಕೆಂದರೆ ಸ್ಪಷ್ಟತೆ ನೀಡಬೇಕು ಎಂದರು.

Join Whatsapp
Exit mobile version